Saturday, April 27, 2024
spot_imgspot_img
spot_imgspot_img

ಮತ್ತೆ ಶುರುವಾಗುತ್ತಾ ಐಪಿಯಲ್! ಏನು ಹೇಳುತ್ತೆ ಬಿಸಿಸಿಐ..?

- Advertisement -G L Acharya panikkar
- Advertisement -

ನವದೆಹಲಿ: ಕೊರೋನ ವೈರಸ್ ಹಾವಳಿಯಿಂದಾಗಿ ಸ್ಥಗಿತಗೊಂಡಿರುವ ಐಪಿಎಲ್ 14ನೇ ಆವೃತ್ತಿಯನ್ನು ಟಿ20 ವಿಶ್ವಕಪ್‌ಗೆ ಮುನ್ನ ಆಯೋಜಿಸಲು ಬಿಸಿಸಿಐ ಯೋಜನೆ ಸಿದ್ಧಪಡಿಸಿದೆ. ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ನಡುವಿನ ಒಂದು ತಿಂಗಳ ಕಾಲಾವಕಾಶದಲ್ಲಿ ಐಪಿಎಲ್ ಪೂರ್ಣಗೊಳಿಸಲು ಬಿಸಿಸಿಐ ರೂಪುರೇಷೆ ರೂಪಿಸುತ್ತಿದೆ.

ಐಪಿಎಲ್‌ನಲ್ಲಿ ಸದ್ಯ 29 ಪಂದ್ಯ ನಡೆದಿದ್ದು, ಇನ್ನು 31 ಪಂದ್ಯ ಬಾಕಿ ಉಳಿದಿವೆ. 8 ಡಬಲ್ ಹೆಡರ್‌ಗಳ (ಒಂದೇ ದಿನ 2 ಪಂದ್ಯ) ಸಹಿತ 4 ವಾರಗಳಲ್ಲಿ 31 ಪಂದ್ಯ ಮುಗಿಸಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ಮೇ 29ರಂದು ನಡೆಯಲಿರುವ ಬಿಸಿಸಿಐ ಎಸ್‌ಎಂಜಿಯಲ್ಲಿ ಈ ಯೋಜನೆ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಟಿ20 ವಿಶ್ವಕಪ್ ಅಕ್ಟೋಬರ್ 18ರಂದು ಆರಂಭಗೊಳ್ಳಲಿದೆ. ಭಾರತದಲ್ಲಿ ನಿಗದಿಯಾಗಿರುವ ಈ ಟೂರ್ನಿಯ ಭವಿಷ್ಯ ಜೂನ್ 2ರಂದು ನಡೆಯುವ ಐಸಿಸಿ ಸಭೆಯಲ್ಲಿ ನಿರ್ಧಾರವಾಗಲಿದೆ. ಕೊರೋನಾದಿಂದಾಗಿ ಭಾರತದಲ್ಲಿ ಟೂರ್ನಿ ನಡೆಯದಿದ್ದರೆ ಯುಎಇಗೆ ಸ್ಥಳಾಂತರವಾಗಲಿದೆ. ಐಪಿಎಲ್ ಟೂರ್ನಿಯನ್ನೂ ಯುಎಇಯಲ್ಲೇ ನಡೆಸಲು ಬಿಸಿಸಿಐ ಸದ್ಯ ಒಲವು ತೋರಿದೆ.

- Advertisement -

Related news

error: Content is protected !!