Tuesday, April 20, 2021
spot_imgspot_img
spot_imgspot_img

ಬಿ.ಸಿ.ರೋಡ್: ಏಪ್ರಿಲ್ 8 ಗೂಡಿನಬಳಿ ಯೂತ್ ಕಾಂಗ್ರೆಸ್ ವತಿಯಿಂದ ರಕ್ತ ದಾನ ಶಿಬಿರ

ಬಿ.ಸಿ.ರೋಡ್: ಯೂತ್ ಕಾಂಗ್ರೆಸ್ ಗೂಡಿನಬಳಿ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಏಪ್ರಿಲ್ 8 ಗುರುವಾರದಂದು ಗೂಡಿನಬಳಿಯ ಸಮುದಾಯ ಭವನದಲ್ಲಿ ಸಾರ್ವಜನಿಕ ರಕ್ತ ದಾನ ಶಿಬಿರ ನಡೆಯಲಿದೆ ಎಂದು ಯೂತ್ ಕಾಂಗ್ರೆಸ್ ಗೂಡಿನಬಳಿ ವಲಯ ಅಧ್ಯಕ್ಷ ರಿಜ್ವಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದಲ್ಲದೆ ರಕ್ತ ನೀಡಲು ಬರುವ ರಕ್ತ ದಾನಿಗಳಿಗೆ ಕೆಎಂಸಿ ಆಸ್ಪತ್ರೆ ವತಿಯಿಂದ ಉಚಿತ ಹೆಲ್ತ್ ಕಾರ್ಡ್ ನೀಡಲಾಗುವುದು ಇದರಿಂದ ಆಸ್ಪತ್ರೆಯ ಶುಲ್ಕದಲ್ಲಿ ಶೇಕಡಾ 50% ರಷ್ಟು ರಿಯಾಯಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.

- Advertisement -

MOST POPULAR

HOT NEWS

Related news

error: Content is protected !!