Thursday, May 2, 2024
spot_imgspot_img
spot_imgspot_img

ಮಂಗಳೂರು: ಫ್ರೀ ಬೆಡ್‌ಗಳಿಗೆ ಹಣಕೊಟ್ಟು ನಕಲಿ ರೋಗಿಗಳ ಭರ್ತಿ: ಕಣಜೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ದಂಧೆ ಬಯಲು

- Advertisement -G L Acharya panikkar
- Advertisement -

ಮಂಗಳೂರು: ರಾತ್ರಿ ಕರ್ಪ್ಯೂ ಸಂದರ್ಭ ಗ್ರಾಮೀಣ ಮಹಿಳೆಯರನ್ನು ಮೆಡಿಕಲ್ ಕಾಲೇಜಿನ ಬಸ್ ಒಂದರಲ್ಲಿ ಸಾಗಾಟ ಮಾಡಲೆತ್ನಿಸಿದ ಪ್ರಕರಣಕ್ಕೆ ಸಂಬ0ಧಿಸಿದ0ತೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಲಾಕ್‌ಡೌನ್ ನಿಯಮ ಉಲ್ಲಂಘನೆಯಡಿ ಕೇಸು ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಬಿಗ್ ಟ್ವಿಟ್ಸ್ ಸಿಕ್ಕಿದ್ದು. ರಾತ್ರೋರಾತ್ರಿ 85 ಮಹಿಳೆಯರನ್ನು ರೋಗಿಗಳಂತೆ ನಟಿಸಲು ಕರೆದೊಯ್ಯುತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಫ್ರೀ ಬೆಡ್‌ಗಳಿಗೆ ಹಣಕೊಟ್ಟು ನಕಲಿ ರೋಗಿಗಳನ್ನು ಭರ್ತಿ ಮಾಡಲಾಗುತ್ತಿತ್ತು. ರೋಗಿಗಳಂತೆ ನಟಿಸಲು ಮಹಿಳೆಯರನ್ನು ಕಣಜೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸ್ ವಿಚಾರಣೆ ವೇಳೆ ಆಸ್ಪತ್ರೆ ಮ್ಯಾನೇಜರ್ ನವಾಜ್ ಬಾಯ್ಬಿಟ್ಟಿದ್ದಾನೆ.

ಎನ್‌ಎಂಸಿ ಪರಿಶೀಲನೆಗೆ ಬಂದಾಗ ಇವರು ರೋಗಿಗಳೆಂದು ತೋರಿಸಲು ಒಬ್ಬರಿಗೆ ಇಂತಿಷ್ಟು ಎಂದು ಹಣ ಕೊಟ್ಟು ಮಹಿಳೆಯರನ್ನು ಕರೆತಂದಿರುವುದಾಗಿ ತನಿಖೆ ವೇಳೆ ಮಾಹಿತಿ ಲಭ್ಯವಾಗಿದೆ. ಮುಲ್ಕಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement -

Related news

error: Content is protected !!