Saturday, May 4, 2024
spot_imgspot_img
spot_imgspot_img

ಕಾಸರಗೋಡು: ಕಾಲೇಜ್‌ ವಿದ್ಯಾರ್ಥಿನಿ ಸಾವಿಗೆ ವಿಷಾಹಾರ ಕಾರಣವಲ್ಲ ; ಪ್ರಾಥಮಿಕ ವರದಿಯಲ್ಲಿ ಏನಿದೆ..?

- Advertisement -G L Acharya panikkar
- Advertisement -
vtv vitla

ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ವಿದ್ಯಾರ್ಥಿನಿ ಪೆರುಂಬಳ ಬೇನೂರಿನ ಅಂಬಿಕಾ ಅವರ ಪುತ್ರಿ ಅಂಜುಶ್ರೀ (19) ಸಾವಿಗೆ ವಿಷಾಹಾರ ಕಾರಣವಲ್ಲ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ತಿಳಿಸಿದೆ.

ಕರುಳಿನ ನಿಷ್ಕ್ರಿಯತೆ ಹಾಗೂ ಜಾಂಡೀಸ್‌ನಿಂದಲೂ ಬಳಲುತ್ತಿದ್ದರು ಎಂದು ವರದಿಯಲ್ಲಿ ಹೇಳಿದೆ. ಹೆಚ್ಚಿನ ತನಿಖೆಗಾಗಿ ಅವರ ಆಂತರಿಕ ಅವಯವಗಳನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಲಾಗಿದೆ. ಆಹಾರದಲ್ಲಿನ ವಿಷ ಅಲ್ಲವೆಂದು ಫಾರೆನ್ಸಿಕ್‌ ಸರ್ಜನ್‌ ಅವರ ಅಭಿಪ್ರಾಯವಾಗಿದೆ. ವಿಷವು ಕರುಳನ್ನು ಕಾರ್ಯನಿರ್ವಹಿಸದಂತೆ ನಿಲ್ಲಿಸಿದೆ ಎಂದು ವರದಿ ತಿಳಿಸಿದೆ.

ಶನಿವಾರ ಬೆಳಗ್ಗೆ ಅಂಜುಶ್ರೀ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಡಿ. 31ರಂದು ಕುಳಿಮಂದಿ ಸೇವಿಸಿದ ಕಾರಣ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ವಿಷಾಹಾರ ಸೇವನೆಯಿಂದ ಸಾವು ಸಂಭವಿಸಿತ್ತೆಂದು ಸಂಶಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಟೇಲ್‌ ಮಾಲಕ ಸಹಿತ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಡೆತ್‌ ನೋಟ್‌ ಪತ್ತೆ: ಕಾಸರಗೋಡಿನ ಸ್ಥಳಿಯ ವೆಬ್‌ಸೈಟ್‌ಯೊಂದು ಅಂಜುಶ್ರೀ ಸಾವು ಆತ್ಮಹತ್ಯೆ ಎಂದು ಪ್ರಾಥಮಿಕ ಪೊಲೀಸ್‌ ವರದಿ ಎಂದು ಸುದ್ದಿ ಬಿತ್ತರಿಸಿದೆ. ವರದಿ ಮುಂದುವರೆಸಿ ಪೊಲೀಸರು ಅಂಜುಶ್ರೀ ಬಳಸುತ್ತಿದ್ದ ಮೊಬೈಲ್‌ ಫೋನ್‌ ವಿವರಗಳು ಮತ್ತು ಡೆತ್‌ ನೋಟ್‌ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಎರಡು ದಿನಗಳಲ್ಲಿ ರಾಸಾಯನಿಕ ಪರೀಕ್ಷೆ ಫಲಿತಾಂಶ ಪೊಲೀಸರ ಕೈ ಸೇರಲಿದೆ ಎಂದು ವರದಿ ಮಾಡಿದೆ

- Advertisement -

Related news

error: Content is protected !!