Friday, April 19, 2024
spot_imgspot_img
spot_imgspot_img

 *ಕಡಬದಿಂದ ಕಾಣೆಯಾದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪತ್ತೆ*

- Advertisement -G L Acharya panikkar
- Advertisement -

ಕಡಬ:-ಬೀಡಿ ಬ್ರ್ಯಾಂಚ್ ಗೆಂದು ತೆರಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯೋರ್ವರು ಕೊಯಿಲ ಗ್ರಾಮದ ಸಂಪಡ್ಕ ಎಂಬಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ.

ಕೋಡಿಂಬಾಳ ಗ್ರಾಮದ ದಾಸರಗುಡ್ಡೆ ನಿವಾಸಿ ಬಾಬು ಎಂಬವರ ಪತ್ನಿ ಸುಮತಿ ಎಂಬವರು ಸೋಮವಾರದಂದು ನಾಪತ್ತೆಯಾಗಿದ್ದು, ಈ ಬಗ್ಗೆ ಅವರ ಗಂಡ ಬಾಬು ಅವರು ಕಡಬ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆ ಹಾಗೂ ಆಕೆಯ ಪ್ರಿಯಕರ ವಿನಯ ಎಂಬವರನ್ನು ಕೊಯಿಲ ಸಮೀಪದ ಸಂಪಡ್ಕ ಎಂಬಲ್ಲಿನ ಅವರ ಸಂಬಂದಿಕರ ಮನೆಯಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆ ತಂದಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯು ತಾನು ಪ್ರಿಯಕರನ ಜತೆ ಜೀವನ ನಡೆಸುವುದಾಗಿ ಹೇಳಿಕೆ ನೀಡಿದ್ದು, ಪೊಲೀಸರು ವಿನಯನ ಜತೆ ಕಳುಹಿಸಿ ಕೊಟ್ಟಿದ್ದಾರೆ.

- Advertisement -

Related news

error: Content is protected !!