Tuesday, April 23, 2024
spot_imgspot_img
spot_imgspot_img

ಹಸುಗಳನ್ನು ಗೋಶಾಲೆಗೆ ಸಾಗಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ

- Advertisement -G L Acharya panikkar
- Advertisement -

ಬೆಂಗಳೂರು: ಬಿಡಾಡಿ ದನಗಳ ವಿಚಾರವಾಗಿ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ. ಹಸುಗಳನ್ನು ಗೋಶಾಲೆಗೆ ಸಾಗಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ.

ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಕ್ರಮ ಅಗತ್ಯವಿದ್ದು, ಹಸುಗಳನ್ನು ಗೋಶಾಲೆಗೆ ಸಾಗಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಬಿಬಿಎಂಪಿ ಜಂಟಿ‌ ನಿರ್ದೇಶಕರಾದ ಡಾ.ಎಸ್ ಶಶಿಕುಮಾರ್​ ತಿಳಿಸಿದ್ದಾರೆ.
ನಗರದಲ್ಲಿ ಸಾಕಷ್ಟು ಬಿಡಾಡಿ ದನಗಳು ಓಡಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ  ತೊಂದರೆಯಾಗುತ್ತಿದೆ. ಈ ಕುರಿತು ಪಾಲಿಕೆಗೆ ಸಾಕಷ್ಟು ದೂರುಗಳು ಬಂದಿವೆ.

ಈ ಹಿನ್ನೆಲೆ ಕ್ರಮ ಕೈಗೊಂಡು ಈಗಾಗಲೇ 102 ಬಿಡಾಡಿ ದನಗಳನ್ನು ಹಿಡಿದು, ಮಾಲೀಕರಿಗೆ ದಂಡ ವಿಧಿಸಲಾಗಿದೆ. ದನಗಳನ್ನು ರಸ್ತೆಗೆ ಬಿಡೋರಿಗೂ ವಾರ್ನಿಂಗ್​ ನೀಡಿದ್ದು, 30 ದಿನಗಳಲ್ಲಿ ನಿಮ್ಮ ಹಸುಗಳಿಗೆ ‌ನಿರ್ದಿಷ್ಟ ಜಾಗ ಕಲ್ಪಿಸಿಕೊಳ್ಳಿ. ಇಲ್ಲದಿದ್ರೆ, ಶಾಶ್ವತವಾಗಿ ಗೋಶಾಲೆಗೆ ಹಸುಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

- Advertisement -

Related news

error: Content is protected !!