Monday, June 22, 2026
spot_imgspot_img
spot_imgspot_img

ಗೀಜರ್ ಬ್ಲಾಸ್ಟ್ ಆಗಿ ಹೊತ್ತಿ ಉರಿದ ಮನೆ!

- Advertisement -
- Advertisement -

ಬೆಳಗಾವಿ: ಗೀಜರ್ ಬ್ಲಾಸ್ಟ್ ಆಗಿ ಮನೆಯೊಂದು ಹೊತ್ತಿ ಉರಿದ ಘಟನೆ ಗೋಕಾಕ್​ನ ಬಸವ ನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಮನೆಯ ಎರಡನೇ ಮಹಡಿಯಲ್ಲಿ ಗೀಜರ್ ಬ್ಲಾಸ್ಟ್ ಆಗಿದ್ದು, ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗಳು ಕಟ್ಟಡದಿಂದ ಹೊರಗೆ ಕಾಣಿಸಿದ್ದು, ಜನರು ಆತಂಕದಿಂದ ಓಡಿ ಬಂದಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ದುರಂತದಲ್ಲಿ ಮನೆಗೆ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕದಳದ ಸಿಬ್ಬಂದಿ ತಿಳಿಸಿದ್ದಾರೆ.

- Advertisement -

Related news

error: Content is protected !!