Thursday, May 9, 2024
spot_imgspot_img
spot_imgspot_img

ಬೆಳಂದೂರು ಗ್ರಾಮದಲ್ಲಿ ಕಾಡುಹಂದಿ ಭೇಟೆಯೊಂದಿಗೆ ಚಿರತೆ ಪ್ರತ್ಯಕ್ಷ!

- Advertisement -G L Acharya panikkar
- Advertisement -

ಬೆಳಂದೂರು ಗ್ರಾಮದ ಗುಂಡಿನಾರು ಎಂಬಲ್ಲಿ ಚಿರತೆಯೊಂದು ಪ್ರತ್ಯಕ್ಷವಾದ ಬಗ್ಗೆ ವರದಿಯಾಗಿದೆ. ಸ್ಥಳೀಯ ನಿವಾಸಿ ಬೈಕಲ್ಲಿ ಮನೆಗೆ ತೆರಳುತ್ತಿದ್ದಾಗ ಚಿರತೆಯೊಂದು ಕಾಡುಹಂದಿಯನ್ನು ಹಿಡಿದು ರಸ್ತೆ ದಾಟುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸಾರ್ವಜನಿಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೆಲ ಸಮಯಗಳ ಹಿಂದೆ ಪುತ್ತೂರುತಾಲೂಕಿನ ಪುರುಷರ ಕಟ್ಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಸಿದ್ದರು. ಪುರುಷರಕಟ್ಟೆಯ ನಡುಗುಡ್ಡೆ ಚಂದಪ್ಪ ಪೂಜಾರಿ ರವರ ಜಾಗದಲ್ಲಿ ಚಿರತೆ ಹಾದುಹೋಗಿ ಸುದ್ದಿಯಾಗಿತ್ತು.

ಸರ್ವೆ ,ಮುಂಡೂರು,ಬನ್ನೂರು,ಪಡೀಲ್,ಕೋಡಿಂಬಾಡಿ ಹಾಗೂ ಕಡಬ ತಾಲೂಕಿನ ಪಾಲ್ತಾಡಿ,ಚೆನ್ನಾವರ,ಬಂಬಿಲ ಸೇರಿದಂತೆ ಕೆಲವು ಕಡೆಗಳಲ್ಲಿ ಚಿರತೆ ಪ್ರತ್ಯಕ್ಷಗೊಳ್ಳುತ್ತಿರುವ ಘಟನೆಗಳು ವರದಿಯಾಗಿವೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ವೆ ಮೊಗೇರಡ್ಕ ಎಂಬಲ್ಲಿ ಬೋನು ಅಳವಡಿಸಿದರೂ ಚಿರತೆ ಸಿಕ್ಕಿರಲಿಲ್ಲ. ಬಳಿಕ ಪೆರುವಾಜೆಯಲ್ಲಿ ಕಾಣಿಸಿತ್ತು, ಇದೀಗ ಬೆಳಂದೂರಿನಲ್ಲಿ ಕಾಣ ಸಿಕ್ಕಿದೆ ಎನ್ನಲಾಗಿದೆ.

- Advertisement -

Related news

error: Content is protected !!