Saturday, June 13, 2026
spot_imgspot_img
spot_imgspot_img

ಬೆಳ್ಳಾರೆ: ತಂಡದಿಂದ ಯುವಕನಿಗೆ ಹಲ್ಲೆ; ಗಾಯಾಳು ಆಸ್ಪತ್ರೆಗೆ ದಾಖಲು..!

- Advertisement -
- Advertisement -

ಬೆಳ್ಳಾರೆ: ಯುವಕನೋರ್ವನ ಮೇಲೆ ತಂಡವೊಂದು ಹಲ್ಲೆ ನಡೆಸಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ಬೆಳ್ಳಾರೆ ಪೇಟೆಯಲ್ಲಿ ನಡೆದಿದೆ.

ಹಲ್ಲೆಯಿಂದ ಗಾಯಗೊಂಡ ಯುವಕ ಆಶೀರ್ ಬೆಳ್ಳಾರೆ ಎಂದು ಗುರುತಿಸಲಾಗಿದೆ.

ರಾತ್ರಿ 9:30 ಸಮಯಕ್ಕೆ ಬೆಳ್ಳಾರ ಪೇಟೆಯಲ್ಲಿ ಅಜರುದ್ದೀನ್ ಮತ್ತು ಜಮಾಲ್ ಬೆಳ್ಳಾರೆ ಎಂಬವರು ಆಶೀರ್ ಎಂಬ ಯುವಕ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. ಹಲ್ಲೆಯಿಂದ ಗಾಯಗೊಂಡಿದ್ದ ಯುವಕನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

- Advertisement -

Related news

error: Content is protected !!