- Advertisement -





- Advertisement -
ಬೆಳ್ತಂಗಡಿ: ಅಕ್ರಮ ಪ್ರವೇಶ ಮಾಡಿ ಅಡಿಕೆ ಮರದಿಂದ ಅಡಿಕೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ವಿಚಾರಿಸಿದ ಮಹಿಳೆಗೆ ಬೈದು ಜೀವ ಬೆದರಿಕೆ ಹಾಕಿರುವ ಘಟನೆ ಶಿಬಾಜೆ ಗ್ರಾಮ ಬೆಳ್ತಂಗಡಿ ಎಂಬಲ್ಲಿ ನಡೆದಿದೆ.
ಸಿ ಎಮ್ ಉಲಹನನ್, ಸಿ ಎಮ್ ರಾಜು ಆರೋಪಿಗಳು ಎನ್ನಲಾಗಿದೆ.
ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದಲ್ಲಿ ಎಲಿಯಮ್ಮಎಂಬವರ ಗಂಡನ ಜಮೀನು ಇದ್ದು , ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜಾಗಕ್ಕೆ, ಅಳವಡಿಸಿದ ಮರದ ಬೇಲಿಯನ್ನು ತೆಗೆದು ಜಾಗ ತಮ್ಮದೆಂದು ಹೇಳಿ ಅಡಿಕೆ ಮರದಿಂದ ಬಿದ್ದ ಸುಮಾರು ಅರ್ಧ ಗೋಣಿ ಚೀಲದಷ್ಟು ಅಡಿಕೆಯನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಈ ಬಗ್ಗೆ ಆರೋಪಿಗಳಲ್ಲಿ ಮಹಿಳೆ ವಿಚಾರಿಸಿದಾಗ ಮಹಿಳೆಗೆ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
- Advertisement -