Sunday, June 7, 2026
spot_imgspot_img
spot_imgspot_img

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ-ಬೈಕ್ ಸವಾರ ಸಾವು!

- Advertisement -
- Advertisement -

ಬೆಳ್ತಂಗಡಿ : ಮಂಗಳೂರು -ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಸೋಮಂತಡ್ಕ ಸಮೀಪದ ಮುಂಡಾಜೆ ಸೀಟ್ ಬಳಿ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಘಟನೆ ಮಾ.5 ರಂದು ಸಂಜೆ ನಡೆದಿದೆ.

ಘಟನೆಯಿಂದ ಕಡಿರುದ್ಯಾವರ ಗ್ರಾಮದ ಎರ್ಮಾಲಪಲ್ಕೆ ಮನೆ ನಿವಾಸಿ ಸುದರ್ಶನ್(22.ವ) ಹಾಗೂ ಸಹಸವಾರೆ ಆತನ ತಾಯಿ ಗುಲಾಬಿ(43.ವ) ಯವರು ಗಂಭೀರ ಗಾಯಗೊಂಡಿದ್ದು, ಇವರನ್ನು ಸ್ಥಳೀಯರ ಸಹಾಯದಿಂದ ಚಿಕಿತ್ಸೆಗಾಗಿ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಸುದರ್ಶನ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು(ಮಾ.6) ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಬಸ್ ಚಾಲಕ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಘಡನೆ ನಡೆದ ಸ್ಥಳದಿಂದ ಸುಮಾರು 3 ಕಿ.ಮೀ ದೂರದ ಮುಂಡಾಜೆಯ ಕಾಪಿನಬಾಗಿಲು ಎಂಬಲ್ಲಿ ಸ್ಥಳೀಯರು ಬಸ್ಸನ್ನು ತಡೆದು ನಿಲ್ಲಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!