Friday, April 19, 2024
spot_imgspot_img
spot_imgspot_img

ಬೆಳ್ತಂಗಡಿ: ರಸ್ತೆಬದಿ 6 ಮಂಗಗಳ ಮೃತದೇಹ ಪತ್ತೆ

- Advertisement -G L Acharya panikkar
- Advertisement -

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಮಂಗಳೂರು-ವಿಲ್ಲುಪುರಂ -73 ರ ಮುಂಡಾಜೆ ಗ್ರಾಮದ ಕಾಯರ್ತೋಡಿ ರಸ್ತೆಯ ಬಳಿ ರಕ್ಷಿತಾರಣ್ಯ ಪ್ರದೇಶದಲ್ಲಿ ರಸ್ತೆಬದಿ 6 ಮಂಗಗಳ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.

ಸುಮಾರು 6 ಮಂಗಗಳ ಮೃತ ದೇಹ ರಸ್ತೆ ಬದಿ ಪತ್ತೆಯಾಗಿರುವುದನ್ನು ಮುಂಜಾನೆ ಪಾದಚಾರಿಗಳು ನೋಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಆರೋಗ್ಯ ಇಲಾಖೆ ಹಾಗೂ ಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸುತ್ತಮುತ್ತ ಆತಂಕ ಸೃಷ್ಟಿಯಾಗಿದೆ.

ಇತ್ತೀಚೆಗೆ ಬೆಳಾಲು ರಸ್ತೆ ಸಮೀಪ ಎರಡು ಮಂಗಗಳ ಮೃತದೇಹ ಸಿಕ್ಕಿದ್ದು, ಅದರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಮತ್ತೆ 6 ಮಂಗಗಳ ಮೃತದೇಹ ಪತ್ತೆಯಾಗಿರುವುದು ತಾಲೂಕಿನಲ್ಲಿ ಮತ್ತೆ ಆತಂಕ ಸೃಷ್ಟಿಸುಯಾಗುವಂತೆ ಮಾಡಿದೆ.

ಇತ್ತೀಚೆಗೆ ಕೃಷಿಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಈ ಹಿನ್ನೆಲೆ ಕೊಂದು ಎಸೆದಿರಬಹುದೇ ಅಥವಾ ಇನ್ನಾವುದಾದರು ಆರೋಗ್ಯ ಸಮಸ್ಯೆಯಿಂದ ಸತ್ತು ಬಿದ್ದಿರಬಹುದೇ ಎಂಬುದು ಆರೋಗ್ಯ ಇಲಾಖೆ ಪರಿಶೀಲನೆಯಿಂದಷ್ಟೆ ತಿಳಿದುಬರಬೇಕಿದೆ.

- Advertisement -

Related news

error: Content is protected !!