Friday, July 24, 2026
spot_imgspot_img
spot_imgspot_img

ಶಬರಿಮಲೆ ಯಾತ್ರೆಗೆ ತೆರಳಿದ್ದ ಬೆಳ್ತಂಗಡಿಯ ವ್ಯಕ್ತಿ ರೈಲಿನಿಂದ ಬಿದ್ದು ಮೃತ್ಯು

- Advertisement -
- Advertisement -

ಮಂಗಳೂರು: ಶಬರಿಮಲೆ ಯಾತ್ರೆಗೆ ತೆರಳಿದ್ದ ಬೆಳ್ತಂಗಡಿಯ ವ್ಯಕ್ತಿಯೊಬ್ಬರು ರೈಲಿನಿಂದ ಬಿದ್ದು ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ವಸಂತ ಪೂಜಾರಿ(60) ಎಂದು ಗುರುತಿಸಲಾಗಿದ್ದು, ಶಬರಿಮಲೆ ಯಾತ್ರೆಗಾಗಿ ಮಂಗಳೂರಿನಿಂದ ಕೇರಳಕ್ಕೆ ರೈಲು ಮೂಲಕ ಅವರು ಏ.17 ರಂದು ಪ್ರಯಾಣಿಸಿದ್ದರು. ಅದೇ ದಿನ ರಾತ್ರಿ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಕೇರಳದ ತ್ರಿಶೂರ್ ಆಸ್ಪತ್ರೆಗೆ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಶನಿವಾರ ತಡರಾತ್ರಿ ಸಾವನ್ನಪ್ಪಿದ್ದರು. ಇಂದು (ಏ.19) ಮೃತದೇಹವನ್ನು ಸ್ವಗ್ರಾಮಕ್ಕೆ ರವಾನಿಸಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!