Sunday, June 14, 2026
spot_imgspot_img
spot_imgspot_img

ಬೆಳ್ತಂಗಡಿ: ಹೆರಿಗೆ ವೇಳೆ ಹಾಕಿದ ಸ್ಟಿಚ್‌ನ ನೋವು ತಾಳಲಾರದೆ ಬಾಣಂತಿ ಆತ್ಮಹತ್ಯೆ..!!

- Advertisement -
- Advertisement -

ಬೆಳ್ತಂಗಡಿ: ಹೆರಿಗೆ ವೇಳೆ ಹಾಕಿದ ಸ್ಟಿಚ್‌ನ ನೋವು ತಾಳಲಾರದೆ ಬಾಣಂತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಲ್ಕೇರಿಮೊಗ್ರು ಗ್ರಾಮದ ಜಾರಿಗೆದಡಿ ನಿವಾಸಿ ಆನಂದ ಮಲೆಕುಡಿಯ ಅವರ ಪತ್ನಿ ಸುಪ್ರೀತಾ ಅವರಿಗೆ ಆ.1ರಂದು ಉಡುಪಿಯಲ್ಲಿ ಹೆರಿಗೆಯಾಗಿದ್ದು, ಈ ವೇಳೆ ಗಾಯಕ್ಕೆ ಹೊಲಿಗೆ ಹಾಕಲಾಗಿತ್ತು.

ಅನಂತರ ವಿಪರೀತ ನೋವು ಕಂಡುಬಂದಿದ್ದು, ಆ. 26ರಂದು ನೋವು ತಾಳಲಾಗದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!