- Advertisement -
- Advertisement -
ಬೆಂಗಳೂರು: ನಗರದಲ್ಲಿ ಇಂದು ಒಂದೇ ದಿನ ಮೂವರು ಪೌರಕಾರ್ಮಿಕರು ಕೊರೊನಾಗೆ ಬಲಿಯಾಗಿದ್ದಾರೆ. ಚಿಕಿತ್ಸೆಗಾಗಿ ಅಲೆದು ಅಲೆದು ಬೆಡ್ ಸಿಗದೇ 28 ವರ್ಷದ ಯುವತಿ ಸಾವನ್ನಪ್ಪಿದ್ದಾರೆ. ನಗರವನ್ನು ಸ್ವಚ್ಛವಾಗಿಡಲು ಪ್ರತಿನಿತ್ಯ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪೌರ ಕಾರ್ಮಿಕ ಯುವತಿಗೆ ಬೆಡ್ ಸಿಗದೇ ಸಾವನ್ನಪ್ಪಿರುವುದು ನಿಜಕ್ಕೂ ದುರದುಷ್ಟಕರ ಸಂಗತಿ.
ಮೃತ ಯುವತಿ ನಾಗೇನಹಳ್ಳಿಯಲ್ಲಿ ವಾರ್ಡ್ ನಂಬರ್ 22ರಲ್ಲಿ ಪೌರಕಾರ್ಮಿಕರಾಗಿ ಸೇವೆ ಕರ್ತವ್ಯ ನಿರ್ವಹಿಸುತ್ತಿದ್ದರು. ಮತ್ತೊಂದುಕಡೆ ದೀಪಾಂಜಲಿ ನಗರ ಪೌರಕಾರ್ಮಿಕ ಮಹಿಳೆ ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನೊಂದುಕಡೆ ಕೆ.ಆರ್ ಪೇಟೆಯಲ್ಲಿ ಪೌರಕಾರ್ಮಿಕರೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಇವರೆಲ್ಲರಿಗೂ ಬೆಡ್ ಸಿಗದೇ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
- Advertisement -