Tuesday, July 21, 2026
spot_imgspot_img
spot_imgspot_img

ಬೆಂಗಳೂರು: ತಾಯಿ–ದೊಡ್ಡಮ್ಮನ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳುಹಿಸಿದ ಆರೋಪ; ಫೋನ್ ನೋಡಿ ಪೋಷಕರು ಅಚ್ಚರಿ!

- Advertisement -
- Advertisement -

ಬೆಂಗಳೂರು: ಓದ್ಬೇಕು ಅಂತ ಪೋಷಕರ ಮೊಬೈಲ್ ಪಡೆದ ಯುವತಿ, ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಫೋಟೋವನ್ನೇ ಪ್ರಿಯಕರನಿಗೆ ಕಳುಹಿಸಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ. ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧವೇ ತಾಯಿ ದೂರು ಕೊಟ್ಟಿರುವ ವಿಚಿತ್ರ ಪ್ರಕರಣ ಇದು. 22ರ ಯುವತಿ ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾಳೆ.

ತಿಂಗಳ ಹಿಂದೆ ಅಪರಿಚಿತ ಯುವಕನ ಜೊತೆ ಮಾತನಾಡಿ ಸಿಕ್ಕಿಬಿದ್ದಿದ್ದಳು. ಬಳಿಕ ಓದ್ಬೇಕು ಅಂತ ಪೋಷಕರ ಬಳಿ ಮೊಬೈಲ್ ಕೇಳಿ ಪಡೆದಿದ್ದಾಳೆ. ಆದ್ರೆ ಬಳಿಕ ಯುವತಿ ಮೊಬೈಲ್ ಮತ್ತು ಪಾಸ್​​ವರ್ಡ್ ನೀಡದೆ ಆಟವಾಡಿಸಿದ್ದಾಳೆ.ಖಾಸಗಿ ಫೋಟೋಗಳನ್ನ ಪ್ರಿಯಕರನಿಗೆ ಕಳಿಸಿದ ಮಗಳ ವಿರುದ್ಧವೇ ತಾಯಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ಕೊಟ್ಟಿದ್ದು, ಪ್ರಕರಣ ಕೂಡ ದಾಖಲಾಗಿದೆ.

ಇತ್ತೀಚೆಗೆ ತಂದೆಗೆ ವಿಚಾರ ತಿಳಿಸಿ ತಾಯಿಯೇ ಆಕೆಯ ಮೊಬೈಲ್ ಪಾಸ್​ವರ್ಡ್ ಪಡೆದಿದ್ದಾರೆ. ಈ ವೇಳೆ ಮಗಳ ಮೊಬೈಲ್ ಪರಿಶೀಲನೆ ಮಾಡಿದಾಗ ಫೋಟೋ ಕಳಿಸಿರೋ ವಿಚಾರ ಬಯಲಾಗಿದೆ. ತಾಯಿ ಮತ್ತು ದೊಡ್ಡಮ್ಮ ಮಲಗಿದ್ದಾಗ ಮಗಳು ಖಾಸಗಿ ಫೋಟೋ ತೆಗೆದಿದ್ದಾರೆ. ಅಷ್ಟೇ ಅಲ್ಲದೇ ಆ ಫೋಟೋಗಳನ್ನ ತನ್ನ ಪ್ರಿಯಕರನಿಗೆ ಕಳಿಸಿರೋ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೋಷಕರು ಪ್ರಶ್ನೆ ಮಾಡಿದಾಗ ಆತನನ್ನೇ ಮದುವೆಯಾಗೋದಾಗಿ ಯುವತಿ ಹಠಕ್ಕೆ ಬಿದ್ದಿದ್ದಾಳೆ. ಸದ್ಯ ಮಗಳಿಗೆ ಬುದ್ಧಿ ಹೇಳಿ ಫೋಟೋಗಳನ್ನ ತಾಯಿಯೇ ಡಿಲೀಟ್ ಮಾಡಿಸಿದ್ದಾರೆ. ಬಳಿಕ ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಠಾಣೆಗೆ ದೂರು ನೀಡಿದ್ದು. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!