Tuesday, April 20, 2021
spot_imgspot_img
spot_imgspot_img

ಮಂಗಳೂರು: ಸ್ಕೂಟರ್ ಸವಾರನನ್ನು ತಡೆದು ಲಕ್ಷಾಂತರ ರೂ. ದೋಚಿದ ಖದೀಮರು

ಮಂಗಳೂರು: ಮಂಗಳೂರು ನಗರದ ಪಾಂಡೇಶ್ವರದ ಓಲ್ಡ್‌ ಕೆಂಟ್‌ ರಸ್ತೆಯಲ್ಲಿ ಸ್ಕೂಟರ್‌ ಸವಾರರೊಬ್ಬರನ್ನು ಮೂವರು ಅಪರಿಚಿತ ವ್ಯಕ್ತಿಗಳು ತಡೆದು ನಿಲ್ಲಿಸಿ 16,20,000 ರೂ. ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ.

ಸೂರಲ್ಪಾಡಿಯ ಅಬ್ದುಲ್‌ ಸಲಾಂ (49) ಹಣ ಕಳೆದು ಕೊಂಡ ವ್ಯಕ್ತಿ. ಅಬ್ದುಲ್‌ ಸಲಾಂ ಅವರು ತನ್ನ ಅಕ್ಕನ ಮಗಳ ವಿವಾಹಕ್ಕಾಗಿ ಬಟ್ಟೆ ಮತ್ತು ಚಿನ್ನ ಖರೀದಿಸಲು 16,20,000 ರೂ. ನಗದು ಹಣದೊಂದಿಗೆ ಆಕ್ಟಿವಾ ಹೋಂಡಾ ಸ್ಕೂಟರ್‌ನಲ್ಲಿ ಒಲ್ಡ್‌ ಕೆಂಟ್‌ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ದಾರಿ ಮಧ್ಯೆ 3 ಮಂದಿ ಅಪರಿಚಿತರು ತಡೆದು ಸ್ಕೂಟರ್‌ನಿಂದ ಲಕೋಟೆಯೊಂದು ಕೆಳಗೆ ಬಿದ್ದಿದೆ ಎಂದು ಹೇಳಿದ್ದಾರೆ.

ಅಬ್ದುಲ್‌ ಸಲಾಂ ಅವರು ಸ್ಕೂಟರ್‌ ನಿಲ್ಲಿಸಿ ಇಳಿದು ರಸ್ತೆಯಲ್ಲಿ ಏನು ಬಿದ್ದಿರಬಹುದೆಂದು ಹಿಂದಿರುಗಿ ನೋಡುವಷ್ಟರಲ್ಲಿ ಸ್ಕೂಟರಿನ ಹುಕ್‌ಗೆ ಸಿಕ್ಕಿಸಿದ್ದ ಪ್ಲಾಸ್ಟಿಕ್‌ ಲಕೋಟೆಯನ್ನು ಮೂವರು ಅಪರಿಚಿತರು ಎತ್ತಿಕೊಂಡು ಪರಾರಿಯಾಗಿದ್ದಾರೆ. ಅಬ್ದುಲ್‌ ಸಲಾಂ ಅವರು 16,20,000 ರೂ. ಗಳನ್ನು ಈ ಪ್ಲಾಸ್ಟಿಕ್‌ ಲಕೋಟೆಯಲ್ಲಿ ಇರಿಸಿದ್ದರು.

ಈ ಬಗ್ಗೆ ಪಾಂಡೇಶ್ವರ ಪೊಲೀಸ್‌ ಠಾಣೆಗೆ ಅಬ್ದುಲ್‌ ಸಲಾಂ ಅವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

MOST POPULAR

HOT NEWS

Related news

error: Content is protected !!