Saturday, September 12, 2026
spot_imgspot_img
spot_imgspot_img

ಬೆಂಗಳೂರು: ರಸ್ತೆ ದಾಟಲು ನಿಂತಿದ್ದಾಗ ತಲೆ ಸುತ್ತಿ ಬಿದ್ದ ವಿದ್ಯಾರ್ಥಿ–ಖಾಸಗಿ ಬಸ್ ಹರಿದು ಸಾವು

- Advertisement -
- Advertisement -

ಬೆಂಗಳೂರು: ರಸ್ತೆ ದಾಟಲು ನಿಂತಿದ್ದಾಗ ತಲೆ ಸುತ್ತಿ ಬಿದ್ದು ಖಾಸಗಿ ಬಸ್ ತಲೆ ಮೇಲೆ ಹರಿದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ನಡೆದಿದೆ.

ವರುಣ್ (16) ಮೃತ ದುರ್ದೈವಿ. ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ವರುಣ್ ತಂದೆಗೆ ಆರಾಮಿಲ್ಲ ಎಂದು ಔಷಧಿ ತರಲು ಹೋಗಿದ್ದ. ರಸ್ತೆ ದಾಟಲು ನಿಂತಾಗ ತಲೆ ಸುತ್ತಿ ಬಿದ್ದಿದ್ದಾನೆ. ಈ ವೇಳೆ ಏಕಾಏಕಿ ಖಾಸಗಿ ಬಸ್ ಅಡಿಗೆ ಸಿಲುಕಿದ್ದಾನೆ. ವಿದ್ಯಾರ್ಥಿಯ ಮೇಲೆ ಬಸ್ ಹರಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ವರುಣ್ ಎಸ್‌ಎಸ್‌ಎಲ್‌ಸಿ ಉನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದ. ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ನಡೆಯುತ್ತಿದೆ. ಈ ಹಿನ್ನೆಲೆ ಎರಡೂ ಭಾಗದ ವಾಹನಗಳು ಒಂದೇ ದಾರಿಯಲ್ಲಿ ಸಾಗಬೇಕು. ಇದರಿಂದ ರಸ್ತೆಯುದ್ದಕ್ಕೂ ವಾಹನದಟ್ಟಣೆ ಕಿರಿಕಿರಿ ಹೆಚ್ಚಾಗಿದೆ. ರಸ್ತೆ ದಾಟಬೇಕೆಂದರೆ ಜನ ಕಾದುಕಾದು ಸುಸ್ತಾಗಬೇಕು. ರಸ್ತೆ ದಾಟಲು ನಿಂತಾಗ ವರುಣ್ ತಲೆ ಸುತ್ತಿ ಬಿದ್ದು ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!