Saturday, October 31, 2026
spot_imgspot_img
spot_imgspot_img

ಬೆಂಗಳೂರು: ಸ್ವಿಮ್ಮಿಂಗ್ ಪೂಲ್‌ನಲ್ಲಿ ವಿದ್ಯುತ್‌ ಶಾಕ್‌ಗೆ ಇಬ್ಬರು ವಿದೇಶಿಗರು ಬಲಿ

- Advertisement -
- Advertisement -

ಬೆಂಗಳೂರು: ನಗರದ ಹೋಟೆಲ್‌ ಒಂದರ ಸ್ವಿಮ್ಮಿಂಗ್ ಪೂಲ್‌ನಲ್ಲಿ ವಿದ್ಯುತ್‌ ಶಾಕ್‌ಗೆ ಇಬ್ಬರು ವಿದೇಶಿಗರು ಬಲಿಯಾಗಿದ್ದಾರೆ. ಈ ಅವಘಡದಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ.

ಸ್ಲೋವೇಕಿಯಾ ಪ್ರಜೆ ಓರಿಯಾಟ್ (45) ಹಾಗೂ ಡಚ್ ಪ್ರಜೆ ಅಲೆಕ್ಸಾಂಡರ್ ಮ್ಯಾಕ್ಸಿಲನ್ (59) ಮೃತ ವಿದೇಶಿಗರು. ನಗರದ ಕಾನ್ರಾಡ್ ಹೋಟೆಲ್‌ನ 3ನೇ ಮಹಡಿಯಲ್ಲಿರುವ ಸ್ವಿಮ್ಮಿಂಗ್ ಪೂಲ್‌ನಲ್ಲಿ ಅ.30ರ ರಾತ್ರಿ 11:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ರಾತ್ರಿ ಸ್ವಿಮ್ ಮುಗಿಸಿ ಹೋಗುವಾಗ ಜಾರಿ ಬಿದ್ದಿದ್ದು, ಈ ವೇಳೆ ಕರೆಂಟ್ ಶಾಕ್‌ನಿಂದ ಇಬ್ಬರೂ ಸಾವನ್ನಪ್ಪಿದ್ದಾರೆ. ಕಳೆದ ಕೆಲ ದಿನಗಳಿಂದ ಇವರು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು ಎಂದು ತಿಳಿದು ಬಂದಿದೆ.

ಸ್ವಿಮ್ಮಿಂಗ್‌ ಪೂಲ್‌ಗೆ ಬಿದ್ದಿದ್ದ ಇಬ್ಬರನ್ನು ರಕ್ಷಿಸಲು ಮುಂದಾಗಿದ್ದ ಅಮೇರಿಕ ಮೂಲದ ವ್ಯಕ್ತಿ ಹಾಗೂ ಅಟೆಂಡರ್‌ಗೆ ಗಾಯಗಳಾಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಕೂಡ ಪ್ರಾಣಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆಸಲಾಗುತ್ತಿದೆ.

ಹೋಟೆಲ್‌ ಸಿಬ್ಬಂದಿ ನಿರ್ಲಕ್ಷ್ಯದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಕಾನ್ರಾಡ್ ಹೋಟೆಲ್ ಮ್ಯಾನೇಜ್ಮೆಂಟ್ ವಿರುದ್ಧ ಹಲಸೂರು ಠಾಣೆಯಲ್ಲಿ ಅಲೆಕ್ಸಾಂಡರ್‌ ಪತ್ನಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಣಿಪಾಲ್ ಆಸ್ಪತ್ರೆಗೆ ಎರಡೂ ಮೃತದೇಹಗಳ ರವಾನಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!