Thursday, March 28, 2024
spot_imgspot_img
spot_imgspot_img

ಬಜರಂಗದಳದ ಧ್ಯೇಯ ವಾಕ್ಯವೇ “ಸೇವಾ ಸಂಸ್ಕಾರ ಸುರಕ್ಷಾ”

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ: ಸೇವಾ ಸಂಸ್ಕಾರ ಸುರಕ್ಷಾ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಈ ದೇಶ.ಈ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆ ಬಜರಂಗದಳ.

ಸಂಘದ ಮಾರ್ಗದರ್ಶನದಲ್ಲಿ ಸಮಾಜದ ಕಟ್ಟ ಕಡೆಯ ಹಿಂದೂವಿನ ನೋವಿಗೂ ಸ್ಪಂದನೆ ಮಾಡುವ ಸಂಘಟನೆ ಬಜರಂಗದಳ. ಕೊರೋನಾ ಎಂಬ ಈ ಮಹಾಮಾರಿಯ ಸಂದರ್ಭದಲ್ಲಿ ಯಾರೂ ಕೂಡ ಅಶ್ಪೃಶ್ಯರಾಗಬಾರದು ಅಥವಾ ಕೊರೋನಾ ಭಾದಿತರು ಹಾಗೂ ಕೊರೋನಾದಿಂದ ಮೃತರಾದ ಶರೀರದ ಶವಸಂಸ್ಕಾರ ಮಾಡಲು ಯಾರು ಇಲ್ಲ ಎಂದು ಆಗಬಾರದು ಎಂದು ಹಿಂದೂ ಸಂಘಟನೆಗಳು ಜವಾಬ್ದಾರಿಯಿಂದ ಮಾಡಲು ಎಂದಿಗೂ ಸಿದ್ದ.

ಆ ದೃಷ್ಟಿಯಲ್ಲಿ ಯಾವುದೇ ಹಿಂದೂವಿನ ಅಂತ್ಯ ಸಂಸ್ಕಾರ ಹಿಂದೂ ಸಂಪ್ರದಾಯ ಪ್ರಕಾರದಲ್ಲಿಯೇ ನಡೆಯಬೇಕು ಎಂಬ ದೃಷ್ಟಿಯಿಂದ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ನೀಡಿದ ಹೇಳಿಕೆ ಸರಿಯಾಗಿದೆ. ಅದರೆ ಅದನ್ನು ಇಂತಹ ಸಂಕಷ್ಟ ಸಂದರ್ಭದಲ್ಲಿ ಅಪಾರ್ಥ ಮಾಡಿಕೊಂಡು ದುಷ್ಟ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಇದನ್ನು ಖಡಾಖಂಡಿತವಾಗಿ ಖಂಡಿಸುತ್ತೇವೆ.

ಸಂಘಟನೆ ಏನೂ ಎಂಬುದು ಹಿಂದೂ ಸಮಾಜಕ್ಕೆ ತಿಳಿದಿದೆ. ಇಂತಹ ಅಪಪ್ರಚಾರ ಮಾಡುತ್ತಿರುವ ಮತಾಂದ ಶಕ್ತಿಗಳ ಹೇಯ ಕೃತ್ಯಗಳು ಇಡೀ ರಾಜ್ಯಕ್ಕೆ ತಿಳಿದಿದೆ. ಹುಣಸೂರಿನಲ್ಲಿ ಹಣಕ್ಕೊಸ್ಕರ ಮಕ್ಕಳ ಅಪಹರಣ ಮಾಡಿ ಹತ್ಯೆ ಮಾಡಿರುವುದರಿಂದ ಹಿಡಿದು ಹಿಂದೂ ಕಾರ್ಯಕರ್ತರ ಹತ್ಯೆಗಳು ಹಾಗೂ ದೇಶದ್ಯಾಂತ ಗಲಭೆ ಹಾಗೂ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವ ಸಂಘಟನೆ ಇಂದು ನಮಗೆ ಬುದ್ದಿ ಹೇಳುವ ಅಗತ್ಯವಿಲ್ಲ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ್ ಸುನಿಲ್ ಕೆ.ಆರ್ ಮತ್ತು ಪ್ರಾಂತ ಸಹ ಸಂಚಾಲಕ್ ಮುರಳಿಕೃಷ ಹಸಂತ್ತಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!