Thursday, June 18, 2026
spot_imgspot_img
spot_imgspot_img

ಮೇ 26 ರಂದು ವರ್ಷದ ಮೊದಲ ಚಂದ್ರಗ್ರಹಣ! ಭಾರತದಲ್ಲಿ ಗೋಚರಿಸುತ್ತದೆಯೇ?

- Advertisement -
- Advertisement -

ಇದೇ ತಿಂಗಳ 26 ರಂದು ನಭೋ ಮಂಡಲದಲ್ಲಿ ಒಂದು ಕೌತುಕ ನಡೆಯಲಿದೆ. ಈ ವರ್ಷದ ಮೊದಲ ಸಂಪೂರ್ಣ ಚಂದ್ರಗ್ರಹಣ ಮೇ 26 ರಂದು ವಿಶ್ವದ ಹಲವು ಪ್ರದೇಶಗಳಲ್ಲಿ ಗೋಚರವಾಗಲಿದೆ.

ಅತ್ಯಂತ ಸುಂದರವಾದ ಕಾಸ್ಮಿಕ್ ವಿದ್ಯಮಾನವೆಂದು ಪರಿಗಣಿಸಲ್ಪಟ್ಟ ಈ ಸಂಪೂರ್ಣ ಚಂದ್ರ ಗ್ರಹಣವನ್ನು ಬ್ಲಡ್ ಮೂನ್ ಎಂದೂ ಕರೆಯುತ್ತಾರೆ. ಏಕೆಂದರೆ ಭೂಮಿಯ ಸೂರ್ಯೋದಯ ಮತ್ತು ಸೂರ್ಯಾಸ್ತಗಳಿಂದ ಚಂದ್ರನ ಮುಖದ ಮೇಲೆ (ಗ್ರಹಣ ಮಧ್ಯದಲ್ಲಿ) ಚದುರಿದ ಬೆಳಕು ಬೀಳುವುದರಿಂದ ಸ್ವಲ್ಪ ಕೆಂಪು-ಕಿತ್ತಳೆ ಬಣ್ಣದಲ್ಲಿ ಚಂದ್ರ ಕಾಣುತ್ತದೆ. ಈ ವಿದ್ಯಮಾನದ ಸಮಯದಲ್ಲಿ, ಚಂದ್ರನ ಬಣ್ಣವು ಧೂಳಿನ ಕಣಗಳು ಮತ್ತು ಅದರ ಮೇಲ್ಮೈಯನ್ನು ತಲುಪುವ ಬಣ್ಣಗಳ ವಿಭಿನ್ನ ತರಂಗಾಂತರಗಳನ್ನು ಅವಲಂಬಿಸಿರುತ್ತದೆ.

ಗ್ರಹಣದ ಒಟ್ಟು ಅವಧಿ 5 ಗಂಟೆ, 2 ನಿಮಿಷಗಳು. ಪೂರ್ಣ ಗ್ರಹಣದ ಅವಧಿ 14 ನಿಮಿಷಗಳು. ಒಟ್ಟು ಚಂದ್ರ ಗ್ರಹಣ ಭಾರತದಲ್ಲಿ ಮಧ್ಯಾಹ್ನ 2:17ಕ್ಕೆ ಪ್ರಾರಂಭವಾಗಿ ಸಂಜೆ 7:19ಕ್ಕೆ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಭೂಮಿಯು ಶೇಕಡಾ 101.6 ರಷ್ಟು ಚಂದ್ರನನ್ನು ಆವರಿಸುತ್ತದೆ.

driving

ಭಾರತದಲ್ಲಿ ಗೋಚರಿಸುತ್ತದೆಯೇ?
ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹೌದು, ಭಾರತದ ಜನರು ರಕ್ತ ಚಂದ್ರನನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಪೂರ್ವ ಭಾರತದಲ್ಲಿ ವಾಸಿಸುವ ಆಕಾಶ ವೀಕ್ಷಕರು ಚಂದ್ರಗ್ರಹಣದ ಕೊನೆಯ ಭಾಗವನ್ನು, ಪೂರ್ವ ದಿಗಂತಕ್ಕೆ ಬಹಳ ಹತ್ತಿರದಲ್ಲಿ ಚಂದ್ರೋದಯಕ್ಕೆ ಸ್ವಲ್ಪ ಮುಂಚೆ ನೋಡಬಹುದು. ಚಂದ್ರನ ಭಾಗಶಃ ಗ್ರಹಣ ಮಧ್ಯಾಹ್ನ 3: 15 ರ ಸುಮಾರಿಗೆ ಪ್ರಾರಂಭವಾಗಿ ಸಂಜೆ 6: 22 ಕ್ಕೆ ಕೋಲ್ಕತ್ತಾದಲ್ಲಿ ಕೊನೆಗೊಳ್ಳುತ್ತದೆ.

- Advertisement -

Related news

error: Content is protected !!