- Advertisement -
- Advertisement -


ಭಟ್ಕಳ: ಚಲಿಸುತ್ತಿದ್ದ ಬೈಕ್‌ಗೆ ಟ್ಯಾಂಕರ್‌ವೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಯಲ್ಲಿದ್ದ ಅವರ ಪತ್ನಿ ಗಾಯಗೊಂಡ ಘಟನೆ ನೂರ್ ಮಸೀದಿಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಮುರ್ಡೇಶ್ವರ ಬಸ್ತಿಯ ನಿವಾಸಿ ಈಶ್ವರ ನಾಯ್ಕ(61) ಅವರ ಪತ್ನಿ ಭಾರತಿ ನಾಯ್ಕ (47) ಗಾಯಗೊಂಡು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈಶ್ವರ ನಾಯ್ಕ ತಮ್ಮ ಪತ್ನಿಯೊಂದಿಗೆ ಭಟ್ಕಳದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಟ್ಯಾಂಕರ್ ಈಶ್ವರ ನಾಯ್ಕ ಚಲಾಯಿಸುತ್ತಿದ್ದ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಈಶ್ವರ್ ಅವರ ತಲೆಯ ಮೇಲೆ ಟ್ಯಾಂಕರ್‌ನ ಚಕ್ರ ಹಾದುಹೋಗಿದೆ. ಹೆಲೈಟ್ ಧರಿಸಿದ್ದರೂ ಅಪಘಾತದ ತೀವ್ರತೆ ಹೆಚ್ಚಿತ್ತು ಎಂದು ತಿಳಿದುಬಂದಿದೆ.
- Advertisement -








