Thursday, June 18, 2026
spot_imgspot_img
spot_imgspot_img

ನಾಯಿ ಚೈನ್‍ನಿಂದ ಕತ್ತು ಹಿಸುಕಿ, ಚಾಕುವಿನಿಂದ ಇರಿದು ಪತ್ನಿಯ ಕೊಲೆ

- Advertisement -
- Advertisement -

ಭೋಪಾಲ್: ನಾಯಿ ಚೈನ್ ನಿಂದ ಕತ್ತು ಹಿಸುಕಿ ನಂತ್ರ ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆಗೈದಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಕೊಲೆಯ ಬಳಿಕ ಪತ್ನಿಯ ಶವ ಬಳಿಯೇ ಕೆಲ ಸಮಯ ಕುಳಿತ ಆರೋಪಿ ತದನಂತರ ತನ್ನ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.


22 ವರ್ಷದ ಅಂಶು ಶರ್ಮಾ ಪತಿ ಹರ್ಷನಿಂದ ಕೊಲೆಯಾದ ಪತ್ನಿ. ಆಗಸ್ಟ್ 8ರಂದು ದೇವಸ್ಥಾನದಲ್ಲಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅಂಶು ಮತ್ತು ಹರ್ಷ ಪ್ರೇಮ ವಿವಾಹವಾಗಿದ್ದರು. ಮದುವೆ ಬಳಿಕ ಅಂಶು ಮತ್ತು ಹರ್ಷ ಜಾವರಾ ಕಾಂಪೌಂಡ್ ನಲ್ಲಿರುವ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ದಂಪತಿ ನಡುವೆ ಸಣ್ಣ ಸಣ್ಣ ವಿಷಯಗಳಿಗೂ ಜಗಳ ನಡೆಯುತ್ತಿತ್ತು. ಸದ್ಯ ಪೊಲೀಸರು ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

- Advertisement -

Related news

error: Content is protected !!