Wednesday, June 26, 2024
spot_imgspot_img
spot_imgspot_img

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌.. A3 ಪವನ್ ಮನೆಯಲ್ಲಿ ಬಿಳಿ ಬಣ್ಣದ ಟವಲ್​ ಮೇಲೆ ರಕ್ತದ ಗುರುತು ಪತ್ತೆ!

- Advertisement -G L Acharya panikkar
- Advertisement -

ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಚಿತ್ರದುರ್ಗ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ದರ್ಶನ್​ ಅಂಡ್ ಗ್ಯಾಂಗ್​​ ಅನ್ನು ನಿನ್ನೆ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ಕೋರ್ಟ್​ ಮತ್ತೆ 5 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದೆ. ಹೀಗಾಗಿ ಇಂದಿನಿಂದ ಮತ್ತೊಂದು ಹಂತದ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಎವಿಡೆನ್ಸ್​ಗಳನ್ನ ಮುಂದಿಟ್ಟುಕೊಂಡು ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ನಿನ್ನೆ ರಾತ್ರೋರಾತ್ರಿ ಪೊಲೀಸ್​ ಅಧಿಕಾರಿಗಳು ದರ್ಶನ್ ಮನೆಯಲ್ಲಿ ಮಹಜರು ನಡೆಸಿದ್ದರು. ಇದೇ ವೇಳೆ A3 ಆರೋಪಿ ಪವನ್ ವಾಸವಿದ್ದ ರೂಂನಲ್ಲಿ ಬಟ್ಟೆ ಪತ್ತೆಯಾಗಿವೆ. ರೂಂನಲ್ಲಿ ಇಟ್ಟಿದ್ದ ಬಟ್ಟೆಯನ್ನು ಆರೋಪಿ ಪೊಲೀಸರಿಗೆ ತೋರಿಸಿದ್ದಾನೆ. ಆಗ ಪ್ಯಾಂಟ್, ಶರ್ಟ್ ಹಾಗೂ ಬಿಳಿ ಬಣ್ಣದ ಟವಲ್​ ಮೇಲೆ ರಕ್ತದ ಗುರುತು ಪತ್ತೆಯಾಗಿವೆ. ಕೂಡಲೇ ಮಹಜರು ಪ್ರಕ್ರಿಯೆ ಮುಕ್ತಾಯಗೊಳಿಸಿ ಪ್ಯಾಂಟ್, ಶರ್ಟ್ ಹಾಗೂ ಬಿಳಿ ಬಣ್ಣದ ಟವಲ್​ ಅನ್ನು​ ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು, ಕೊಲೆ ನಡೆದ ದಿನ ಆರೋಪಿ ನಂದೀಶ್ ಧರಿಸಿದ್ದ ಶೂ ಅನ್ನು ದರ್ಶನ್​ ಮನೆಯಲ್ಲಿ ಬಿಟ್ಟಿದ್ದನಂತೆ. ಸದ್ಯ ಆರೋಪಿ ನಂದೀಶ್ ಶೂ ಮತ್ತು ಬಟ್ಟೆಯನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಬಳಿಕ ಆರ್​ಆರ್ ನಗರದಲ್ಲಿರೋ ನಂದೀಶನ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೂವರು ಆರೋಪಿಗಳಾದ ನಾಗರಾಜ್, ದೀಪಕ್, ನಂದೀಶ್​ನನ್ನು ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ. ಈ ಕೇಸ್​ಗೆ ಸಂಬಂಧಪಟ್ಟಂತೆ ಕೆಲವು ವಸ್ತುಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ .

- Advertisement -

Related news

error: Content is protected !!