Saturday, April 27, 2024
spot_imgspot_img
spot_imgspot_img

ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ, ವೋಟಿಂಗ್ ಲೆಕ್ಕಾಚಾರ ಶುರು; ಕಿಚ್ಚ ಮೇಲೆತ್ತೋ ಕೈ ಯಾರದ್ದು…?

- Advertisement -G L Acharya panikkar
- Advertisement -

ಯಾರಾಗ್ತಾರೆ ಬಿಗ್‌ಬಾಸ್ ಸೀಸನ್‌-10ರ ವಿನ್ನರ್ & ರನ್ನರ್….?

ಬಿಗ್‌ಬಾಸ್ ಸೀಸನ್‌ 10 ಗ್ರ್ಯಾಂಡ್ ಫಿನಾಲೆಯ ಬಿಗ್‌ ರಿಸಲ್ಟ್‌ಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. 110 ದಿನಗಳಿಂದ ಕಾಯುತ್ತಿದ್ದ ಕಾತುರಕ್ಕೆ ಇಂದು ಮಿಲಿಯನ್ ಡಾಲರ್ ಉತ್ತರ ಸಿಗಲಿದೆ. ಟಾಪ್‌ 5ನಲ್ಲಿ ಇರೋರಲ್ಲಿ ಕಿಚ್ಚ ಸುದೀಪ್‌ ಮೇಲೆತ್ತೋ ಕೈ ಯಾರದ್ದು ಅನ್ನೋ ಲೆಕ್ಕಾಚಾರ ಜೋರಾಗಿದೆ.

ಬಿಗ್‌ಬಾಸ್ ಸೀಸನ್ 10ರ ಗ್ರ್ಯಾಂಡ್ ಫಿನಾಲೆ ಆರಂಭವಾಗಿದೆ. ಫಿನಾಲೆಯ ಟಾಪ್ 5ರಲ್ಲಿ ವಿನಯ್, ಕಾರ್ತಿಕ, ಡ್ರೋನ್ ಪ್ರತಾಪ್, ಸಂಗೀತಾ, ವರ್ತೂರು ಸಂತೋಷ್ ಉಳಿದುಕೊಂಡಿದ್ದಾರೆ. ಈ ಐವರಲ್ಲಿ ಸೀಸನ್ 10ರ ಕಪ್ ಒಬ್ಬರ ಪಾಲಿಗೆ ಒಲಿದು ಬರಲಿದೆ.

ಮಾಹಿತಿ ಪ್ರಕಾರ ಬಿಗ್‌ಬಾಸ್ ಸೀಸನ್ 10 ಟಾಪ್ 5 ಕಂಟೆಸ್ಟೆಂಟ್‌ಗಳಿಗೆ ಬಿಗ್‌ಬಾಸ್‌ನಲ್ಲಿ ಭರ್ಜರಿ ಟ್ವಿಸ್ಟ್ ಕೊಡಲಾಗಿದೆ. ಇಡೀ ಕರುನಾಡೇ ಕುತೂಹಲದಿಂದ ಕಾಯ್ತಿರೋ ಬಿಗ್ ರಿಸಲ್ಟ್‌ ಲೇಟೆಸ್ಟ್ ಪ್ರೋಮೋ ರಿಲೀಸ್‌ ಆಗಿದೆ. ಆ ವಿಡಿಯೋದಲ್ಲಿ ಫಿನಾಲೆಗೆ ಎಲ್ಲರೂ ರೆಡಿಯಾಗಿದ್ದು, ಕೊನೇ ಹಂತದಲ್ಲಿ ಎಲಿಮಿನೇಟ್ ಆದ ತುಕಾಲಿ ಸಂತೂ ಅವರು ವರ್ತೂರು ಸಂತೋಷ್‌ಗೆ ಆಲ್ ದಿ ಬೆಸ್ಟ್ ಹೇಳಿ ಬಿಗ್‌ಬಾಸ್ ಮನೆಯಿಂದ ಹೊರ ಹೋಗಿದ್ದಾರೆ.

ಉಳಿದಿರೋ ಟಾಪ್ 5 ಸ್ಪರ್ಧಿಗಳಲ್ಲಿ ಬಿಗ್‌ಬಾಸ್ ಸೀಸನ್ 10 ಕಪ್ ಯಾರಿಗೆ ಅನ್ನೋದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ. ಕಿಚ್ಚ ಸುದೀಪ್ ಈ ಒಂದು ಟೈಟಲ್ ನಿಮ್ಮಲ್ಲಿ ಯಾರೋ ಒಬ್ಬರ ಪಾಲಿಗೆ ಅಂತ ಹೇಳಿದ್ದು ಐದು ಸ್ಪರ್ಧಿಗಳಲ್ಲಿ ಗೆಲ್ಲುವ ಕಿಚ್ಚು ಹೆಚ್ಚಾಗಿದೆ. ಬಿಗ್‌ಬಾಸ್ ಫಿನಾಲೆಯ ಫೈನಲ್ ಎಲಿಮಿನೇಷನ್‌ನಲ್ಲಿ ವೀಕ್ಷಕರ ವೋಟಿಂಗ್ ನಂಬರ್‌ಗಳು ನಿರ್ಣಾಯಕವಾಗಿದೆ. ಟಾಪ್ 5ರ ಸ್ಪರ್ಧಿಗಳಿಗೆ ಕೋಟಿಗಟ್ಟಲೇ ಕನ್ನಡಿಗರು ವೋಟ್ ಮಾಡಿದ್ದು, ಯಾರಿಗೆ ಎಷ್ಟು ವೋಟ್ ಅನ್ನೋದು ರಿವೀಲ್ ಆಗಿಲ್ಲ. ಕೊನೆಯದಾಗಿ ಎಲಿಮಿನೇಟ್ ಆದ ತುಕಾಲಿ ಅವರಿಗೆ 26 ಲಕ್ಷದ 20 ಸಾವಿರದ 749 ವೋಟ್‌ಗಳು ಬಂದಿವೆ. ಇನ್ನು ಕಾರ್ತಿಕ್‌, ಸಂಗೀತಾ, ವಿನಯ್, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಅವರು 35 ಲಕ್ಷ ವೋಟ್‌ಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇನ್ನೂ ಅಂತಿಮವಾಗಿ ಟಾಪ್ 5ರ ಸ್ಪರ್ಧಿಗಳಿಗೆ ಬಿದ್ದ ವೋಟಿಂಗ್ ನಂಬರ್ ರಿವೀಲ್ ಆಗಿಲ್ಲ. ಫೈನಲಿ ಟಾಪ್ 5ನಲ್ಲಿ ಇರೋರಲ್ಲಿ ಕಿಚ್ಚ ಮೇಲೆತ್ತೋ ಕೈ ಯಾರದ್ದು…..?

- Advertisement -

Related news

error: Content is protected !!