- Advertisement -
- Advertisement -





ಉಡುಪಿ: ಕೆಲಸದ ನಿಮಿತ್ತ ಕುಂದಾಪುರಕ್ಕೆ ಹೋದವರು ವಾಪಾಸು ಬಾರದೇ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಬೈಂದೂರು ತಾಲೂಕು ಬಿಜೂರು ಗ್ರಾಮದ ಕಂಚಿಕಾನ ನಿವಾಸಿ ಸುರೇಂದ್ರ (31) ಎಂದು ಗುರುತಿಸಲಾಗಿದೆ.
ಅ.27ರಂದು ಬೆಳಿಗ್ಗೆ 8 ಗಂಟೆಗೆ ಕೆಲಸದ ನಿಮಿತ್ತ ಕುಂದಾಪುರಕ್ಕೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ 5 ಇಂಚು ಎತ್ತರ, ಕನ್ನಡ ಮಾತನಾಡಬಲ್ಲವರಾಗಿದ್ದು ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೋಲಿಸ್ ಠಾಣೆಯನ್ನು ಸಂಪರ್ಕಿಸುವಂತೆ ಬೈಂದೂರು ಪೋಲಿಸ್ ಠಾಣಾಧಿಕಾರಿಗಳು ತಿಳಿಸಿದ್ದಾರೆ.
- Advertisement -








