Friday, August 28, 2026
spot_imgspot_img
spot_imgspot_img

ಕೊರೊನಾ ನಡುವೆಯು ಬಿಹಾರ ಚುನಾವಣಾ ದಿನಾಂಕ ಪ್ರಕಟ

- Advertisement -
- Advertisement -

ಬಿಹಾರ : ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ನವದೆಹಲಿಯಲ್ಲಿ ದಿನಾಂಕ ಪ್ರಕಟಿಸಿದ್ದಾರೆ. ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28, ನವೆಂಬರ್ ಮೂರು ಮತ್ತು ಏಳರಂದು ಮತದಾನ ನಡೆಯಲಿದೆ.

ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ. ಬಿಹಾರದಲ್ಲಿ ಸುಮಾರು 8 ಕೋಟಿ ಮತದಾರರಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಎಲ್ಲ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

- Advertisement -

Related news

error: Content is protected !!