- Advertisement -
- Advertisement -



ಮಂಗಳೂರು: ಟೂರಿಸ್ಟ್ ವ್ಯಾನ್‌ನಡಿ ಬಿದ್ದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ಅರ್ಕುಳ ದ್ವಾರದ ಬಳಿ ನಡೆದಿದೆ. ಬಿ.ಸಿ. ರೋಡ್ ನಿವಾಸಿ ಹಂಝ (47) ಮೃತಪಟ್ಟವರು.
ರವಿವಾರ ಬೆಳಗ್ಗೆ ಹಂಝ ಮತ್ತು ಅವರ ಪತ್ನಿ ಫಾತಿಮಾ ಸ್ಕೂಟರ್‌ನಲ್ಲಿ ಬಿ.ಸಿ. ರೋಡ್‌ನಿಂದ ಅವರ ತಾಯಿ ಮನೆಯಾದ ಮಂಗಳೂರಿಗೆ ಬರುತ್ತಿದ್ದರು. ಈ ವೇಳೆ ಪಿಕಪ್ ವಾಹನವೊಂದು ಸ್ಕೂಟರ್‌ಗೆ ಢಿಕ್ಕಿಯಾಯಿತು.
ಆಗ ಫಾತಿಮಾ ಎಡಭಾಗಕ್ಕೆ ಹಾಗೂ ಹಂಝ ವಾಹನದ ಬಲಭಾಗಕ್ಕೆ ಬಿದ್ದರು. ಈ ವೇಳೆ ವೇಗವಾಗಿ ಬರುತ್ತಿದ್ದ ಟೂರಿಸ್ಟ್ ವ್ಯಾನ್ ಹಂಝ ಅವರ ಮೇಲೆಯೇ ಹಾದು ಹೋಗಿದೆ. ಪರಿಣಾಮವಾಗಿ ಹಂಝ ಮೃತಪಟ್ಟಿದ್ದಾರೆ. ಫಾತಿಮಾ ಗಾಯಗೊಂಡಿದ್ದಾರೆ.
- Advertisement -








