Friday, May 3, 2024
spot_imgspot_img
spot_imgspot_img

ಬಂಟ್ವಾಳ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ಇಬ್ಬರು ಗಂಭೀರ

- Advertisement -G L Acharya panikkar
- Advertisement -

ಬಂಟ್ವಾಳ: ಮುಂಜಾನೆ ವೇಳೆ ಬೈಕ್ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನ ಕೈಕಂಬ ಎಂಬಲ್ಲಿ ನಡೆದಿದೆ. ವಿದ್ಯುತ್ ಅಪಘಾತದ ಪರಿಣಾಮ ಸವಾರ ಹಾಗೂ ಸಹಸವಾರ ಇಬ್ಬರು ಕೂಡ ಗಂಭೀರ ಗಾಯಗೊಂಡಿದ್ದು , ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್ ಸವಾರ ಶರೋನ್ ಹಾಗೂ ಸಹಸವಾರ ಸೆಬಾಸ್ಟಿಯನ್ ಗಂಭೀರ ಗಾಯಗೊಂಡವರು.

ಬಿಸಿರೋಡಿನಿಂದ ಮಂಗಳೂರು ನ ಕಡೆಗೆ ಹೋಗುತ್ತಿದ್ದ ವೇಳೆ ಕೈಕಂಬ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಲನೆಯಿಂದ ಬೈಕ್ ಹೆದ್ದಾರಿ ಬದಿಯಲ್ಲಿ ನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರು ಚಿಂತಾಜನಕ ಸ್ಥಿತಿಯನಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..

- Advertisement -

Related news

error: Content is protected !!