Wednesday, May 8, 2024
spot_imgspot_img
spot_imgspot_img

ತಿನ್ನಲು ಕಹಿ, ಆರೋಗ್ಯಕ್ಕೆ ಸಿಹಿ ಈ ಹಾಗಲಕಾಯಿ

- Advertisement -G L Acharya panikkar
- Advertisement -

ಕಹಿ ಹಾಗಲಕಾಯಿಯಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ಬ್ಯಾಕ್ಟಿರಿಯಾ ಮತ್ತು ವೈರಲ್ ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತವೆ.ನಮ್ಮ ಚರ್ಮದ ಅಲರ್ಜಿಯನ್ನು ಗುಣ ಪಡಿಸುತ್ತದೆ ಮತ್ತು ದೃಷ್ಟಿಯ ದೋಷವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಶಕ್ತಿಯುತ ಉತ್ಕರ್ಷಣ ನಿರೋಧಕಗಳು ಹಾನಿಕಾರಕ ಆಮ್ಲಜನಕ ರಾಡಿಕಲ್ ಗಳಿಂದ ಡಿ ಎನ್ ಎ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಕೋಶಗಳ ಸುಗಮ ಕಾರ್ಯ ನಿರ್ವಹಣೆಯನ್ನು ಖಚಿತ ಪಡಿಸುತ್ತದೆ.
ಕಹಿ ಕಲ್ಲಂಗಡಿ ಕ್ಯಾನ್ಸರ್ ವಿರೋಧಿ ಮತ್ತು ಆಂಟಿ ಟ್ಯೂಮರ್ ಗುಣ ಲಕ್ಷಣಗಳನ್ನು ಹೊಂದಿದೆ, ಇದು ಪ್ರಾಸ್ಟೇಟ್ ಕ್ಯಾನ್ಸರ್, ಸ್ತನ ಕ್ಯಾನ್ಸ‌ರ್ ಮತ್ತು ಗರ್ಭಕಂಠದ ಕ್ಯಾನ್ಸರ್ ನ ಅಪಾಯದ ಮಟ್ಟವನ್ನು ಕಡಿಮೆ ಮಾಡುತ್ತದೆ.

ಅತಿಸಾರ ಮೂಲವ್ಯಾಧಿ ನಿವಾರಕ
ನಾವು ಸೇವಿಸುವ ಆಹಾರದಲ್ಲಿ ಏರುಪೇರುಗಳಾಗಿ ಅತಿಸಾರದಂತಹ ಸಮಸ್ಯೆಗಳು ಕಂಡುಬಂದರೆ ಹಾಗಲಕಾಯಿಯನ್ನು ಸೇವನೆ ಮಾಡುವುದರಿಂದ ಅತಿಸಾರ ಬಹುಬೇಗ ಗುಣಮುಖವಾಗುತ್ತದೆ. ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರು ಹಾಗಲಕಾಯಿಯನ್ನು ಹೆಚ್ಚು ಬಳಕೆ ಮಾಡುವುದರಿಂದ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ,

ಮಧುಮೇಹ ನಿವಾರಕ
ಸಾಮಾನ್ಯವಾಗಿ ಮಧುಮೇಹದ ಸಮಸ್ಯೆ ಇರುವವರು ಹಾಗಲಕಾಯಿಯನ್ನು ಸೇವಿಸುವುದು ಅತಿ ಉತ್ತಮ. ದೀರ್ಘ ಕಾಲದವರೆಗೆ ಮಧುಮೇಹಿಗಳು ಹಾಗಲಕಾಯಿಯನ್ನು ಹಸಿಯಾಗಿ ಹಾಗೂ ಬೇಯಿಸಿ ಸೇವನೆ ಮಾಡುವುದರಿಂದಾಗಿ ದೇಹದಲ್ಲಿ ಸಕ್ಕರೆಯ ಅಂಶ ಸ್ಥಿಮಿತದಲ್ಲಿರಲು ಸಾಧ್ಯವಾಗುತ್ತದೆ.
ಹಾಗಲಕಾಯಿಗಳನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ 3 ರಿಂದ ನಾಲ್ಕು ತಿಂಗಳವರೆಗೆ ಪ್ರತಿನಿತ್ಯ ಸೇವನೆ ಮಾಡುವುದರಿಂದಾಗಿ ದೇಹದಲ್ಲಿನ ಸಕ್ಕರೆಯ ಪ್ರಮಾಣ ಸ್ಥಿಮಿತಕ್ಕೆ ಬರುತ್ತದೆ.

ಹೊಟ್ಟೆ ಸಮಸ್ಯೆಗೆ ಪರಿಹಾರ
ಹೊಟ್ಟೆಯಲ್ಲಿ ಹುಣ್ಣು ಅಥವಾ ಕರುಳಿನಲ್ಲಿ ಹುಣ್ಣುಗಳಿದ್ದು ಸಮಸ್ಯೆ ಅನುಭವಿಸುತ್ತಿದ್ದರೆ, ಅಂತವರು ಹಾಗಲಕಾಯಿಯನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದಾಗಿ ಹುಣ್ಣು ಗುಣಮುಖವಾಗುತ್ತದೆ. ದೇಹದಲ್ಲಿರುವ ನಂಜಿನ ಅಂಶವನ್ನು ಹೊರಹಾಕುವಲ್ಲಿಯೂ ಕೂಡಾ ಇದು ಅತ್ಯಂತ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ.

ರಕ್ತಶುದ್ಧಿ ಮಾಡುತ್ತದೆ
ಒಂದು ಲೋಟ ಹಾಗಲಕಾಯಿ ರಸದೊಂದಿಗೆ ಒಂದು ಚಮಚ ಲಿಂಬೆ ಹಣ್ಣಿನ ರಸವನ್ನು ಸೇರಿಸಿ ಬೆಳಗಿನ ಹೊತ್ತಿನಲ್ಲಿ ಪ್ರತಿನಿತ್ಯ ಸೇವನೆ ಮಾಡುವುದರಿಂದಾಗಿ ರಕ್ತಶುದ್ಧಿಯಾಗುತ್ತದೆ ಹಾಗೂ ಹಲವಾರು ರೀತಿಯ ಚರ್ಮರೋಗಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುವ ಮೂಲಕ ಕಾಯಿಲೆಗಳನ್ನು ಬಹುಬೇಗ ಗುಣಪಡಿಸುತ್ತದೆ.

- Advertisement -

Related news

error: Content is protected !!