Thursday, July 23, 2026
spot_imgspot_img
spot_imgspot_img

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ನಡೆದ ಶ್ರೀನಿವಾಸ ಕಲ್ಯಾಣದಲ್ಲಿ ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಪ್ರಸನ್ನ ಮಾರ್ತರಿಗೆ ಅವಮಾನ…!

- Advertisement -
- Advertisement -

ಪತ್ನಿ ಜೊತೆ ಕಾರ್ಯಕ್ರಮಕ್ಕೆ ಬಂದ ಪ್ರಸನ್ನ ಮಾರ್ತರನ್ಮು ಒಳಗೆ ಬರಲು ಬಿಡದೆ ಹೊರಗೆ ದೂಡಿದ ಪುತ್ತಿಲ ಪರಿವಾರದ ಕಾರ್ಯಕರ್ತರು

ಮನೆಗೆ ಬಂದು ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಬಂದಾಗ ಅಪಮಾನ; ಪುತ್ತೂರು ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಕಣ್ಣೀರು ಹಾಕಿ ಪ್ರಾರ್ಥನೆ

2ವರ್ಷದಿಂದ ಸಕ್ರೀಯವಾಗಿದ್ದ ಪುತ್ತಿಲ ಪರಿವಾರ ಮಾಜಿ ಅಧ್ಯಕ್ಷನಿಗೆ 3ನೇ ವರ್ಷದ ಕಾರ್ಯಕ್ರಮಕ್ಕೆ ಪ್ರವೇಶ ನಿರಾಕರಣೆ

ಪುತ್ತೂರು: ಬಿಜೆಪಿ ಪದಾಧಿಕಾರಿಗಳ ನೇಮಕ ಸಂದರ್ಭ ಪುತ್ತಿಲ ಪರಿವಾರದ ಸೂಚನೆಯನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಅವರನ್ನು ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭದಲ್ಲಿ ಪತ್ನಿ ಸಹಿತವಾಗಿ ಬಂದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತರನ್ನು ಪುತ್ತಿಲ ಪರಿವಾರದ ಕಾರ್ಯಕರ್ತರು ಒಳಗೆ ಬರಲು ಬಿಡದೆ ಹೊರಗೆ ದೂಡಿದ ಘಟನೆ ನಡೆದಿದೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ” ಹಿಂದೂ ಸಮಾಜದ ಕಾರ್ಯಕ್ರಮ ಆ ಕಾರ್ಯಕ್ರಮಕ್ಕೆ ನೀವು ಬರಬೇಕು ಅನ್ನುವ ದೃಷ್ಟಿಯಲ್ಲಿ ನನ್ನ ಮನೆಗೆ ಬಂದು ಆಹ್ವಾನ ನೀಡಿದ ಸಂದರ್ಭದಲ್ಲಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ ಗ್ರಾಮ ಮಟ್ಟದಲ್ಲಿ ನಡೆದ ಸಂದರ್ಭದಲ್ಲಿ ನಾವು ಆ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಚಪ್ಪರ ಮೂಹೂರ್ತ ಸಂದರ್ಭದಲ್ಲಿ , ಕಾರ್ಯಾಲಯ ಉದ್ಘಾಟನೆ ಸಂದರ್ಭದಲ್ಲಿ , ಅದೇ ರೀತಿ ಪೇಟೆಯಲ್ಲಿ ಆಮಂತ್ರಣ ವಿತರಣೆ ಸಂದರ್ಭದಲ್ಲಿ ನಾವು ಆ ಕಾರ್ಯಕ್ರಮದಲ್ಲಿ ಸಕ್ರಿಯಾವಾಗಿ ಭಾಗವಹಿಸಿದ್ದೆ. ಹಿಂದೆ ಎರಡು ಬಾರಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ನಾನು ಭಾಗವಹಿಸಿದ್ದೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅನ್ನುವ ಒತ್ತಡ ನನ್ನ ಮೇಲೆ ಹಾಕಿದ್ರು. ತದನಂತ್ರ ಬೇರೆ ಬೇರೆ ವಿಚಾರ ನಡೆಯಿತು. ಅಂತಿಮವಾಗಿ ಪುತ್ತಿಲ ಪರಿವಾರದ ಎಲ್ಲಾ ಹಿತೈಷಿಗಳು ಆ ಕಾರ್ಯ‌ಕ್ರಮದಲ್ಲಿ ಭಾಗವಹಿಸಬೇಕು ಅನ್ನುವ ವಿಚಾರವನ್ನು ಮುಂದಿಟ್ಟುಕೊಂಡು, ನಾನು ಆ ಕಾರ್ಯಕ್ರಮಕ್ಕೆ ಪತ್ನಿ ಸಹಿತ ಬಂದು ಸಭಾಂಗಣಕ್ಕೆ ಹೋದ ಸಂದರ್ಭದಲ್ಲಿ ಗೇಟು ಹಾಕಿ ನನ್ನನ್ನು ಕಾರ್ಯಕ್ರಮದಿಂದ ವಾಪಸ್ಸು ಕಳಿಸುವಂತ ವ್ಯವಸ್ಥೆಯಾಯಿತು. ಅಲ್ಲಿದ್ದ ಕಾರ್ಯಕರ್ತರು ವ್ಯವಸ್ಥೆಯನ್ನು ಒಪ್ಪದೆ ಭಾಗವಹಿಸುವಂತೆ ಮಾಡಿದ್ರು, ಆದ್ರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ನನಗೆ ತುಂಬಾ ನೋವಾಯ್ತು. ನನಗೆ ಅಪಮಾನ ಮಾಡಿವಂತ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಮಹಾಲಿಂಗೇಶ್ವರ ದೇವರ ಮಣ್ಣಿನಲ್ಲಿ ನನ್ನ ಪತ್ನಿ ಕಣ್ಣಿರು ಹಾಕುವಂತ ಸಂದರ್ಭ ಬಂತು. ಈ ರೀತಿಯಾಗಿ ನನಿಗೆ ಅನ್ಯಾಯ ಆಯಿತು. ಯಾರದೋ ಪ್ರೇರಣೆಯಿಂದ ಆ ವ್ಯಕ್ತಿ ಆ ರೀತಿ ಮಾಡಿರಬಹುದು. ನಿನ್ನೆ ಅಪಮಾನ ಮಾಡುವಂತ ಕೆಲಸ ನನ್ನೊಬ್ಬನಿಗೆ ಆಗಿದೆ. ಯಾರಿಗೂ ಮಾಡದಂತ ಅಪಮಾನವನ್ನು ನನಗೆ ಮಾಡಿದ್ರು, ಎಲ್ಲವನ್ನು ಮಹಾಲಿಂಗೇಶ್ವರ ತೀರ್ಮಾನ ಮಾಡಲಿ” ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಹೇಳಿದ್ದಾರೆ.

ಈ ಘಟನೆ ನಡೆದ ಬಳಿಕ ಬಿಜೆಪಿ ರಾಜ್ಯಧ್ಯಕ್ಷರು, ಬಿಜೆಪಿ ಜಿಲ್ಲಾ ಅಧ್ಯಕ್ಷರು, ಮಂಡಲದ ಅಧ್ಯಕ್ಷರುಗಳು ಮತ್ತು ಬಿಜೆಪಿ ಪ್ರಮುಖರು, ಜಿಲ್ಲೆಯ ಎಲ್ಲಾ ಶಾಸಕರು ಕರೆ ಮಾಡಿ ನನಗೆ ಸಾಂತ್ವನ ತಿಳಿಸಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

Related news

error: Content is protected !!