Wednesday, May 1, 2024
spot_imgspot_img
spot_imgspot_img

ಉಚಿತ ಗ್ಯಾಸ್, ನಂದಿನಿ ಹಾಲು ಸೇರಿದಂತೆ 16 ಭರವಸೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಬಿಜೆಪಿ

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದ ವಿಧಾನ ಸಭೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಪ್ರಣಾಳಿಕೆ ರಚಿಸಿರುವ ಸಚಿವ ಡಾ.ಸುಧಾಕರ್ ನೇತೃತ್ವದ ಸಮಿತಿಯು ವಿವಿಧ ವಲಯಗಳ ನಿರೀಕ್ಷೆಗಳು, ಅಗತ್ಯತೆಗಳ ಕುರಿತು ವಲಯವಾರು ತಜ್ಞರ ಜೊತೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿ,16 ಭರವಸೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಬಿಪಿಎಲ್ ಕುಟುಂಬಗಳಿಗೆ ಪ್ರತಿವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.

ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು

  • ಬಿಪಿಎಲ್ ಕುಟುಂಬಕ್ಕೆ ಯುಗಾದಿ, ದೀಪಾವಳಿ, ಗಣೇಶ ಹಬ್ಬಕ್ಕೆ 3 ಫ್ರೀ ಸಿಲಿಂಡರ್
  • ಪೋಷಣಾ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ಅರ್ಧ ಲೀ. ನಂದಿನಿ ಹಾಲು
  • ಪ್ರತೀ ಕುಟುಂಬಕ್ಕೆ ಪಡಿತರದಲ್ಲಿ 5 ಕೆಜಿ ಸಿರಿಧಾನ್ಯ
  • ಎಸ್‌ಸಿ ಎಸ್‌ಟಿ ಮಹಿಳೆಯರಿಗೆ 5 ವರ್ಷಕ್ಕೆ 10 ಸಾವಿರ ಠೇವಣಿ
  • ಪ್ರತೀ ಮಹಾನಗರ ಪಾಲಿಕೆ ವಾರ್ಡ್‌ನಲ್ಲಿ ಅಟಲ್ ಆಹಾರ ಕೇಂದ್ರ
  • ವಿಶ್ವೇಶ್ವರಯ್ಯ ವಿದ್ಯಾಯೋಜನೆಯಡಿ ಸರ್ಕಾರಿ ಶಾಲೆಗಳ ಉನ್ನತೀಕರಣ
  • ಐಎಎಸ್‌ ಕೆಎಎಸ್‌ ಅಭ್ಯರ್ಥಿಗಳಿಗೆ ಆರ್ಥಿಕ ನೆರವು
  • ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತನೆ
  • ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ
  • ಸರ್ವರಿಗೂ ಸೂರು ಯೋಜನೆಯಡಿ 10 ಲಕ್ಷ ವಸತಿ ಸೌಲಭ್ಯ
  • ಸಮನ್ವಯ ಯೋಜನೆಯಡಿ ಸಣ್ಣ ಕೈಗಾರಿಗಳಲ್ಲಿ ಉದ್ಯೋಗಕ್ಕಾಗಿ ಒಡಂಬಡಿಕೆ
  • ಮಿಷನ್ ಸ್ವಾಸ್ಠ್ಯ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ
  • ಕರ್ನಾಟಕವನ್ನು ದೇಶದ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವನ್ನಾಗಿ ರೂಪಿಸಲು 1,500 ಕೋಟಿ ವಿನಿಯೋಗ
  • ಕರ್ನಾಟಕ ಅಪಾರ್ಟ್ಮೆಂಟ್ ಕಾಯಿದೆ ತಿದ್ದುಪಡಿ
  • ಬೆಂಗಳೂರಿನ ಹೊರಗೆ ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವ ಹಬ್
  • ಮೂರು ಜಿಲ್ಲೆಗೆ ಮೆಟ್ರೋ ಸೌಲಭ್ಯ ವಿಸ್ತರಣೆ ಹುಬ್ಬಳ್ಳಿ-ಧಾರಾವಾಢ, ಬೆಳಗಾವಿ ಮತ್ತು ಮೈಸೂರು.
- Advertisement -

Related news

error: Content is protected !!