Monday, June 15, 2026
spot_imgspot_img
spot_imgspot_img

ಪುತ್ತೂರು ಶ್ರೀಮಹಾಲೀಂಗೇಶ್ವರ ದೇಗುಲಕ್ಕೆ ಸೇರಿದ ಜಮೀನಿನಲ್ಲಿದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಮನೆ ನೆಲಸಮ..!

- Advertisement -
- Advertisement -

ಪುತ್ತೂರು ಶ್ರೀಮಹಾಲೀಂಗೇಶ್ವರ ದೇಗುಲದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿದ್ದ. ದೇಗುಲದ ಒಡೆತನದ ಜಮೀನಿನಲ್ಲಿದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರುರವರಿಗೆ ಸೇರಿದ ಮನೆಯೂ ನೆಲಸಮವಾಗಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು ನೆಲಸಮಗೊಳಿಸಿದ್ದು ಯಾರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ.

ಶ್ರೀ ದೇಗುಲದ ಪುಷ್ಕರಣೆ ಬಳಿ ಕಳೆದ ಕೆಲವು ದಿನಗಳಿಂದ ದೇಗುಲದ ವತಿಯಿಂದ ಅಲ್ಲಿ ಬಾಡಿಗೆಗಿದ್ದ ಮನೆಗಳ ತೆರವು ಕಾರ್ಯಾಚರಣೆ ನಡೆದಿತ್ತು. ಇಬ್ಬರು ಮನೆ ಮಾಲೀಕರನ್ನು ಹೊರತುಪಡಿಸಿ ಉಳಿದವರು ಮನೆ ತೆರವಿಗೆ ಸ್ವ ಇಚ್ಛೆಯಿಂದ ಒಪ್ಪಿಗೆ ಸೂಚಿಸಿದ್ದರು. ಉಜಿರೆ ನಿವಾಸಿ ವಕೀಲರೊಬ್ಬರಿಗೆ ಸೇರಿದ ಮನೆಗೆ ಹಾಗೂ ರಾಜೇಶ್ ಬನ್ನೂರುಗೆ ಸೇರಿದ ಕಟ್ಟಡ ತೆರವಿಗೆ ಒಪ್ಪಿಗೆ ಸಿಕ್ಕಿರಲಿಲ್ಲ.

ಎರಡು ದಿನಗಳ ಹಿಂದೆ ಉಜಿರೆ ನಿವಾಸಿ ವಕೀಲರಿಗೆ ಸೇರಿದ ಮನೆಗೆ ಜೆಸಿಬಿ ಯಂತ್ರ ಕೆಲಸ ಮಾಡುತ್ತಿದ್ದ ವೇಳೆ ಮರ ಬಿದ್ದು ಹಾನಿಯಾಗಿತ್ತು, ಬಳಿಕ ಅದನ್ನು ತೆರವುಗೊಳಿಸಲಾಗಿತ್ತು. ನಿನ್ನೆ ತಡ ರಾತ್ರಿ ರಾಜೇಶ್ ಬನ್ನೂರಿಗೂ ಸೇರಿದ ಮನೆಯೂ ನೆಲಸಮವಾಗಿದೆ.

- Advertisement -

Related news

error: Content is protected !!