- Advertisement -
- Advertisement -

ಧಾರವಾಡ: ರಾಜ್ಯದ ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿರುದ್ಧ ಕೆಂಡಕಾರುತ್ತಿದ್ದಾರೆ. ಪ್ರತಿನಿತ್ಯ ಟ್ವೀಟ್ ಮಾಡುತ್ತಾ ಆರ್ಎಸ್ಎಸ್ ವಿರುದ್ಧ ಎಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗಿರುವಾಗಲೇ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರ್ಎಸ್ಎಸ್ ಇತಿಹಾಸದ ಕುರಿತಾದ ಪುಸ್ತಕ ರವಾನಿಸಿದ್ದಾರೆ. ಆರ್ಎಸ್ಎಸ್ 360 ವಿಸ್ತೃತ ಪುಸ್ತಕ ರವಾನೆ ಮಾಡಿದ್ದಾರೆ. ಧಾರವಾಡ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಶಿಮರದ ಅವರ ಮೂಲಕ ಪುಸ್ತಕ ರವಾನಿಸಿದ್ದಾರೆ. ಲಿಂಗಾಯತ ಭವನದ ಮುಂದೆಯೇ ಹುಣಶಿಮರದ ಅವರಿಗೆ ಬಿಜೆಪಿ ಕಾರ್ಯಕರ್ತರು ಪುಸ್ತಕ ನೀಡಿದ್ದಾರೆ.



- Advertisement -








