Sunday, May 5, 2024
spot_imgspot_img
spot_imgspot_img

ಅಮ್ಮನ ಪ್ರಾಣ ಉಳಿಸಿ; ಬ್ಲಾಕ್ ಫಂಗಸ್ ಗೆ ಔಷಧಿ ನೀಡುವಂತೆ ಸರ್ಕಾರದ ಬಳಿ ಕಣ್ಣೀರಿಟ್ಟ ಪುತ್ರಿ

- Advertisement -G L Acharya panikkar
- Advertisement -

ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖಳಾಗಿದ್ದ ತನ್ನ ತಾಯಿ ಇದೀಗ ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದು, ಎಂಫೋಟೆರಿಸಿನ್ ಬಿ ಇಂಜಕ್ಷನ್ ಸಿಗದೇ ಪರದಾಡುತ್ತಿದ್ದೇವೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಮ್ಮನ ಪ್ರಾಣ ಉಳಿಸಿಕೊಡಿ ಎಂದು ಮಗಳೊಬ್ಬಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿರುವ ಶಶಿಕಲಾ ಎಂಬ ಮಹಿಳೆ ಬೆಂಗಳೂರಿನ ಸೆಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಂಫೋಟೆರಿಸಿನ್ ಬಿ ಔಷಧವಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಔಷಧ ಅಭಾವವಿದೆ. ಸರ್ಕಾರಕ್ಕೂ ಇನ್ನೂ ಔಷಧ ಬಂದು ತಲುಪಿಲ್ಲ. ಇರುವ ನಾಲ್ಕು ಡೋಸ್ ಈಗಾಗಲೇ ಹಾಕಲಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಹೇಗಾದರೂ ಮಾಡಿ ಔಷಧ ಪೂರೈಸುವಂತೆ ಶಶಿಕಲಾ ಮಗಳು ಕಣ್ಣೀರಿಟ್ಟಿದ್ದಾರೆ.

ಬೆಳಗ್ಗೆ 5 ರಿಂದ 10 ಗಂಟೆಯವರೆಗೆ ಪಾರ್ಕ್ ತೆರೆಯಲು ಅನುಮತಿ ನೀಡಿದ್ದು, ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡಬಹುದು. ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಸಂಚರಿಸಬೇಕು. ಅಗತ್ಯವಿದ್ದರೆ ಮಾತ್ರ ಅಂತರ ಜಿಲ್ಲಾ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

14 ದಿನಗಳ ಕಾಲವಾದರೂ ಇಂಜಕ್ಷನ್ ನೀಡಬೇಕು ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಹಣ ಖರ್ಚಾಗಿದೆ. ಭಿಕ್ಷೆ ಬೀಡಿಯಾದರೂ ಹಣ ಹೊಂದಿಸ್ತೀನಿ. ಆದರೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ತಕ್ಷಣ ಔಷಧ ನೀಡಿ ಅಮ್ಮನ ಜೀವ ಉಳಿಸಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!