Sunday, April 28, 2024
spot_imgspot_img
spot_imgspot_img

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ಕುಳ-ಕುಂಡಡ್ಕ ಶಾಖೆಯ ನೂತನ‌ ಕಟ್ಟಡ ‘ಕಲಶಾಮೃತ’ ವನ್ನು ಉದ್ಘಾಟನೆ

- Advertisement -G L Acharya panikkar
- Advertisement -

ವಿಟ್ಲ: ವಿಶೇಷವಾದ ಉತ್ಸಹವಿದು. ಸಹಕಾರಿ ಕ್ಷೇತ್ರ ಗ್ರಾಮಾಂತರ ಪ್ರದೇಶದಲ್ಲಿ ಭದ್ರಬುನಾದಿಯನ್ನು ಹೊಂದಿದೆ. ಇಡ್ಕಿದು ಸೇವಾಸಹಕಾರಿ ಸಂಘ ವಿಶೇಷತೆಯನ್ನು ಹೊಂದಿದ ಸಹಕಾರಿಯಾಗಿದೆ. ಯಾಕೆಂದರೆ ಎರಡು ಗ್ರಾಮದಲ್ಲಿ ಒಂದು ಕೇಂದ್ರ ಕಚೇರಿ ಹಾಗೂ ನಾಲ್ಕು ಶಾಖೆಗಳಿರುವುದು ಅವಿಭಜಿತ ದ.ಕ.ಜಿಲ್ಲೆಯಲ್ಲಿ ಇದೇ ಪ್ರಥಮ. ಮಹಿಳೆಯರಿಗೆ ಸ್ವಾವಲಂಭನೆಯ ಬದುಕು ನೀಡುವ ಕೆಲಸ ಸಹಕಾರಿ ಸಂಘಗಳಿಂದ ಆಗುತ್ತಿದೆ. ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ.ನ ಅದ್ಯಕ್ಷ ರಾದ ಸಹಕಾರ ರತ್ನ ಡಾ|| ಎಂ.ಎನ್. ರಾಜೇಂದ್ರ ಕುಮಾರ್ ರವರು ಹೇಳಿದರು.

ಅವರು ಅ.೨೧ರಂದು ಇಡ್ಕಿದು ಸೇವಾಸಹಕಾರಿ ಸಂಘದ ಕುಳ-ಕುಂಡಡ್ಕ ಶಾಖೆಯ ನೂತನ‌ ಕಟ್ಟಡ ‘ಕಲಶಾಮೃತ’ ವನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು‌.

ಜನರಿಗೆ ಹತ್ತಿರವಾಗಿದ್ದರಿಂದ ಇಡ್ಕಿದು ಸಹಕಾರಿ ಸಂಘ ಇಷ್ಟೊಂದು ಯಶಸ್ಸಾಗಲು ಸಾಧ್ಯವಾಗಿದೆ. ಜನರಿಗೆ ಸಕಲ ಸೌಲಭ್ಯವನ್ನು ನೀಡಿದ‌ ಸಂಘ ಇದಾಗಿದೆ. ಈ ಸಂಘ ಜಿಲ್ಲೆಯಲ್ಲೇ ಒಂದು ಮಾದರಿಯಾಗಿದೆ. ಎಲ್ಲರೂ ಒಟ್ಟಾಗಿ ಬೆಳೆಸೋಣ ಎಂದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ನಿರ್ದೇಶಕರಾದ ಟಿ. ಜಿ. ರಾಜಾರಾಮ ಭಟ್ ರವರು ಬ್ಯಾಂಕಿಂಗ್ ಅನ್ನು ಉದ್ಘಾಟಿಸಿ ದರು‌.

ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಡ್ಡುಹೊಡೆಯುವ ರೀತಿಯಲ್ಲಿ ಈ ಸಂಘ ಬೆಳೆದು ನಿಂತಿದೆ: ಅಶೋಕ್ ಕುಮಾರ್ ರೈ

ಪುತ್ತೂರು‌ ಶಾಸಕರಾದ ಅಶೋಕ್ ಕುಮಾರ್ ರೈರವರು ಮಾತನಾಡಿ ಇವತ್ತು ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಇದು ಇತರ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಡ್ಡುಹೊಡೆಯುವ ರೀತಿಯಲ್ಲಿ ವ್ಯವಸ್ಥಿತವಾಗಿ ಬೆಳೆದುನಿಂತಿದೆ. ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕುಗಳು‌ ಮಾತ್ರ ಇದ್ದರೆ ಸಾಲದು ಅದರೊಂದಿಗೆ ಉದ್ದಿಮೆಗಳು ಇದ್ದರೆ ಯಶಸ್ಸು ಸಾಧ್ಯ. ಬ್ಯಾಂಕ್ ಹಾಗೂ ಉದ್ದಿಮೆಗಳು ಜೊತೆಯಾಗಿ ಸಾಗಬೇಕು. ಕೃಷಿಕರಿಗೆ ಸಹಕಾರವಾಗುವ ವ್ಯವಸ್ಥೆ‌ ಇಂತಹ ಸಹಕಾರಿ ಸಂಘಗಳಿಂದ ಆಗಬೇಕಿದೆ. ಬಡ ಜನರ ಕಷ್ಟಗಳಿಗೆ ಸ್ಪಂಧಿಸಿ ಕೆಲಸವಾಗಲಿ ಎಂದರು.

ಸಹಕಾರಿ ಕ್ಷೇತ್ರ ಬಹಳ ಪವಿತ್ರವಾದುದು: ನಾಗರಾಜ ಶೆಟ್ಟಿ

ಮಾಜಿ ಸಚಿವರಾದ ನಾಗರಾಜ ಶೆಟ್ಟಿರವರು ಮಾತನಾಡಿ ಇದೊಂದು ಬಹಳ ಸಂತೋಷದ ವಿಷಯ ವಾಗಿದೆ. ಈ ಗ್ರಾಮೀಣ ಭಾಗದಲ್ಲಿ ಇಷ್ಟೊಂದು ಸುಂದರ ಕಟ್ಟಡ ನಿರ್ಮಾಣ ಮಾಡಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮಾಡಿರುವುದು ಸಂತಸದ ವಿಚಾರ.
ಸಹಕಾರಿ ಕ್ಷೇತ್ರದ‌ ಮೂಲಕ ರೈತರು ದೀನದಲಿತರನ್ನು‌ ಮೇಲಕ್ಕೆತ್ತಲು ಸಾಧ್ಯ. ಸಹಕಾರಿ ಕ್ಷೇತ್ರ ಬಹಳ ಪವಿತ್ರವಾದುದು. ಸಹಕಾರಿ ಕ್ಷೇತ್ರಗಳು ರಾಜಕೀಯ ರಹಿತವಾಗಿರಬೇಕು. ಎಲ್ಲರನ್ನೂ ಒಗ್ಗೂಡಿಸಿ ಜಾತಿ ಮತ ಬೇದವಿಲ್ಲದೆ ಮುನ್ನಡೆದರೆ ಯಶಸ್ಸು ಸಾಧ್ಯ. ರಾಜಕೀಯದಿಂದಾಗಿ ನಮ್ಮ ಅನ್ಯೋನ್ಯತೆ ದೂರವಾಗುತ್ತಿದೆ. ಎಲ್ಲರ ಪ್ರೋತ್ಸಾಹದಿಂದ ಸಂಸ್ಥೆ ಯಶಸ್ಸಾಗಲು ಸಾಧ್ಯ. ಎಲ್ಲರ ಸಹಕಾರದಿಂದ ಈ ಸಹಕಾರಿ ಯಶಸ್ಸಾಗಲಿ ಎಂದರು.

ರೈತರಿಗೆ ಆರ್ಥಿಕ ಚೈತನ್ಯ ತುಂಬುವ ಕೆಲಸ ಇಂತಹ ಸಹಕಾರಿ ಸಂಘಗಳಿಂದ ಆಗುತ್ತಿದೆ: ಸಂಜೀವ ಮಠಂದೂರು

ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರುರವರು ಗಣಕೀಕರಣಕ್ಕೆ ಚಾಲನೆ ನೀಡಿ ಮಾತನಾಡಿ ದೇಶದಲ್ಲಿ ಸಹಕಾರಿ ಕ್ಷೇತ್ರ ಜನರ ಬದುಕಿನ ಅವಿಭಾಜ್ಯ ಅಂಗ ಎಂದು ತೋರಿಸಿಕೊಟ್ಟಿದೆ. ಜನರ ಆಶೋತ್ತರಗಳಿಗೆ ಸ್ಪಂಧಿಸುವ ಕೆಲಸವಾಗಬೇಕು. ಕೇಂದ್ರ ರಾಜ್ಯ ಸರಕಾರಗಳು ಸಹಕಾರಿ ಸಂಘಗಳಿಗೆ ನಿರಂತರ ಸಹಕಾರ ನೀಡುತ್ತಿದೆ. ರೈತರಿಗೆ ಆರ್ಥಿಕ ಚೈತನ್ಯ ತುಂಬುವ ಕೆಲಸ ಇಂತಹ ಸಹಕಾರಿ ಸಂಘಗಳಿಂದ ಆಗುತ್ತಿದೆ. ಅಡಿಕೆ ಬೆಳಗಾರರಿಂದ ಸಹಕಾರಿ ಸಂಘಗಳು ಸುಬೀಕ್ಷೆ ಇಂದ ಇರಲು ಸಾಧ್ಯ. ರಾಜ್ಯದಲ್ಲೇ ಇಡ್ಕಿದು ಒಂದು ಮಾದರಿ ಸಹಕಾರಿ ಸಂಘ ಎಂದರು.

ರಾಷ್ಟ್ರೀಕೃತ ಬ್ಯಾಂಕ್ ಗಳು ನಡೆಸುವ ವ್ಯವಹಾರವನ್ನು ಈ ಸಂಘಗಳು ಮಾಡುತ್ತಿದೆ ಎನ್ನುವುದು ಸಂತಸದ‌ ವಿಚಾರ: ರಾಜೇಶ್ ನಾಯ್ಕ್

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ರವರು ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಕ್ಷೇತ್ರ ನಮ್ಮ ದ.ಕ.ಜಿಲ್ಲೆ. ಗ್ರಾಮದ ಜನರಿಗೆ ಈ ಒಂದು ಸಹಕಾರಿಯಿಂದ ಇನ್ನಷ್ಟು ಪ್ರಯೋಜನ ಸಿಗುವಂತಾಗಲಿ. ರಾಷ್ಟ್ರೀಕೃತ ಬ್ಯಾಂಕ್ ಗಳು ನಡೆಸುವ ವ್ಯವಹಾರವನ್ನು ಈ ಸಂಘಗಳು ಮಾಡುತ್ತಿದೆ ಎನ್ನುವುದು ಸಂತಸದ‌ ವಿಚಾರ.

ಕೃಷಿಕರು ಆರ್ಥಿಕವಾಗಿ ಸುದೃಡವಾಗಲು ಇಡ್ಕಿದು ಸಹಕಾರಿ‌ ಸಂಘದ ಪಾತ್ರ ಅಪಾರ: ದಿವಾಕರ ‌ದಾಸ್ ನೇರ್ಲಾಜೆ

ಎಸ್.ಎಲ್.ವಿ.ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆರವರು ಸೂಪರ್ ಬಝಾರ್ ಅನ್ನು ಉದ್ಘಾಟಿಸಿ ನಾತನಾಡಿ ಕೃಷಿಕರು ಆರ್ಥಿಕವಾಗಿ ಸುದೃಡವಾಗಲು ಇಡ್ಕಿದು ಸಹಕಾರಿ‌ ಸಂಘದ ಪಾತ್ರ ಅಪಾರ. ಸಣ್ಣ ಮಟ್ಟದಲ್ಲಿ ಆರಂಭವಾದ ಈ ಇಂದು ಸಂಘ ಇಷ್ಟೊಂದು ದೊಡ್ಡ ಮಟ್ಟದಲ್ಲಿ‌ ಬೆಳೆದು ನಿಂತಿದೆ. ಸಂಘ ಇನ್ಮಷ್ಟು‌ಎತ್ತರಕ್ಕೆ ಬೆಳೆಯಲಿ‌ ಎಂದು
ಶುಭ ಹಾರೈಸಿದರು.

ಗ್ರಾಮದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ ಕೀರ್ತಿ ಈ ಸಹಕಾರಿ ಸಂಘಕ್ಕೆ ಸಲ್ಲುತ್ತದೆ: ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ

ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿರವರು ಗೋದಾಮು ಅನ್ನು ಉದ್ಘಾಟನೆ ಮಾಡಿ
ಮಾತನಾಡಿ ಈ ಗ್ರಾಮದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ ಕೀರ್ತಿ ಈ ಸಹಕಾರಿ ಸಂಘಕ್ಕೆ ಸಲ್ಲುತ್ತದೆ. ಗ್ರಾಮದ ಜನರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಒಂದೇ ಸೂರಿನಡಿ ಲಭ್ಯವಿದೆ‌. ಇತರ ಸಹಕಾರಿ ಸಂಘ ಇಲ್ಲಿಗೆ ವಿಕ್ಷಣೆಗಾಗಿ ಆಗಮಿಸುವಂತಾಗಿದೆ. ಇದೊಂದು ಮಾದರಿ ಸಂಘವಾಗಿದೆ ಎಂದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ರವರು
ಸಭಾಂಗಣವನ್ನು ಉದ್ಘಾಟನೆ ಮಾಡಿದರು.
ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ ಜಯಕರ್ ರವರುಭದ್ರತಾಕೋಶಕ್ಕೆ ಚಾಲನೆ ನೀಡಿದರು. ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ. ಎಸ್. ಮುಕ್ಕುಡ, ಕೃಷ್ಣಯ್ಯ ವಿಟ್ಲ ಅರಮನೆ, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಮರುವಾಳ, ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್ ಜೆ., ಕೃಷ್ಣಪ್ಪ ಪೂಜಾರಿ ಪಾಂಡೇಲು, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡತ್ತಾರ್, ಕುಂಡಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ತೀರ್ಥರಾಮ ಗೌಡ ಸೇನೆರೆಮಜಲು, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ವಿಟ್ಲ ವಲಯ ಮೇಲ್ವಿಚಾರಕರಾದ ಯೋಗೀಶ್ ಹೆಚ್., ಬಂಟ್ವಾಳ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಗೋಪಾಲ್ ಎನ್.ಜೆ., ಅಳಕೆಮಜಲು ಎ.ಎಂ.ಕಾಟೇಜ್ ನ ಮಹಮ್ಮದ್ ಕುಂಞಿ ಹಾಜಿ ಬೆನೆಡಿಕ್ಟ್ ಡಿ’ಸೋಜ ಕಾರ್ಯಾಡಿ-ಕುಳ, ಸಂಘದ ಉಪಾಧ್ಯಕ್ಷರಾದ ರಾಮ್ ಭಟ್ ನೀರಪಳಿಕೆ, ಆಡಳಿತ ಮಂಡಳಿಯ ನಿರ್ದೇಶಕರಾದ ನಾರಾಯಣ ನೇರ್ಲಾಜೆ, ಪ್ರವೀಣ್ ಕುಮಾರ್ ಕೊಪ್ಪಳ, ಜಯಂತ ಡಿ.ದರ್ಬೆ, ಸುಂದರ ಪಿ.ಪಾಂಡೇಲು, ಜನಾರ್ದನ ಪೂಜಾರಿ ಕಾರ್ಯಾಡಿ, ವಸಂತ ಉರಿಮಜಲು, ಶಿವಪ್ರಕಾಶ್ ಕೆ.ವಿ. ಕೂವೆತ್ತಿಲ, ಶೇಖರ ನಾಯ್ಕ್ ಅಳಕೆ, ನಳಿನಿ ಪೆಲತ್ತಿಂಜ, ರತ್ನ ಸೇಕೆಹಿತ್ಲು, ವಿಜಯಲಕ್ಷ್ಮೀ ಪಿಲಿಪ್ಪೆ, ವೃತ್ತಿಪರ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಮಿತ್ತೂರು ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ.ನ ಅದ್ಯಕ್ಷ ರಾದ ಸಹಕಾರ ರತ್ನ ಡಾ|| ಎಂ.ಎನ್. ರಾಜೇಂದ್ರ ಕುಮಾರ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ, ಎಸ್.ಎಲ್.ವಿ.ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆ, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿರವರನ್ನು ಸನ್ಮಾನಿಸಲಾಯಿತು.

ಮಾಜಿ ಉಪಾಧ್ಯಕ್ಷರುಗಳಾದ ಕೃಷ್ಣಪ್ಪ ಗೌಡ ಸೂರ್ಯ, ಸುಂದರ ಗೌಡ ಸೂರ್ಯ, ತಿಮ್ಮಪ್ಪ ಸಪಲ್ಯ ದೇವಸ್ಯ, ಉಮೇಶ್ ಪೂಜಾರಿ ಪಾಂಡೇಲು, ಕೃಷ್ಣಪ್ಪ ಗೌಡ ಅಡ್ಯಾಲು, ರಾಘವ ಮಂಜಪಾಲು ರವರನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲು‌ರವರು‌ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆತ್ಮಶ್ರೀ, ಆದಿಶ್ರೀ, ಪ್ರಾರ್ಥಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ವಂದಿಸಿದರು. ಶ್ರೀಪತಿ ನಾಯಕ್ ಸನ್ಮಾನಿತರ ಪರಿಚಯ ಮಾಡಿದರು. ಸಂಘದ ಸಿಬ್ಬಂದಿ ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!