ವಿಟ್ಲ: ಎಸ್‌ಡಿಪಿಐ ಪುಣಚ ವಲಯ ಸಮಿತಿ ವತಿಯಿಂದ ಪಕ್ಷದ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಹಾಗೂ ರಕ್ತದಾನ ಶಿಬಿರ ನಡೆಯಿತು.ಎಸ್‌ಡಿಪಿಐ ಪುಣಚ ವಲಯಾಧ್ಯಕ್ಷ ಶಾಫಿ ಮಾಳಿಗೆ ಮತ್ತು ಹಿರಿಯರಾದ ಅಬೂಬಕ್ಕರ್ ಹಾಜಿ ಕುಟ್ಟಿತಡ್ಕ ಅವರು ಧ್ವಜಾರೋಹಣ ನಡೆಸಿದರು. ಪುಣಚ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 62 ಕಾರ್ಯಕರ್ತರು ರಕ್ತದಾನ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಮನೆಲಾ ಚರ್ಚ್ ನ ಉಪಾಧ್ಯಕ್ಷ ಸಿರಿಲ್ ಪೇರವೂ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಶಾಫಿ ಮಾಳಿಗೆ ಮಾತನಾಡಿ ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಯನ್ನು ಅರಿತು ಸಹಾಯ ಹಸ್ತ ನೀಡುವವರಾಗಬೇಕು, ಜನರಿಗೆ , ಜನರ ಸಮಸ್ಯೆಗೆ ಸ್ವಂದಿಸುವವರಾಗಬೇಕು ಎಂದರು.
ಸಭಾ ಕಾರ್ಯಕ್ರಮದಲ್ಲಿ ಹಿರಿಯರಾದ ಇಸ್ಮಾಯಿಲ್ ಹಾಜಿ ಪೈಸಾರಿ, ವಿಟ್ಲ ಪಿ.ಎಫ್.ಐ. ಡಿವಿಷನ್ ಕಾರ್ಯದರ್ಶಿ ನಝೀರ್ ಪುಣಚ ಉಪಸ್ಥಿತರಿದ್ದರು.
ರಕ್ತದಾನ ಶಿಬಿರದಲ್ಲಿ, ಉಜ್ರುಪಾದೆ ಜಮಾತಿನ ಅಧ್ಯಕ್ಷ ಎನ್. ಪಿ. ಇಸ್ಮಾಯಿಲ್ ನಾಟೆಕಲ್, ಹಿರಿಯರಾದ ರವೀಂದ್ರ ಶೆಟ್ಟಿ, ಸದಾನಂದ ರೈ, ಎಂ.ಎಸ್. ಅಬ್ದುಲ್ಲಾ, ಬಲ್ನಾಡು ಗ್ರಾಮದ ಸಮಿತಿ ಅಧ್ಯಕ್ಷರಾದ ಹೆಚ್.ಅಶ್ರಫ್ ಹಸಂತಡ್ಕ, ಪುಣಚ ಗ್ರಾಮದ ಸಮಿತಿ ಆಧ್ಯಕ್ಷರಾದ ಬದ್ರುದ್ದೀನ್, ಕಾರ್ಯದರ್ಶಿಗಳಾದ ಜಬ್ಬಾರ್ ಆಲಂತಡ್ಕ, ಸಹದ್ ಕಲ್ಲಾಜೆ, ವಿಟ್ಲ ವಲಯ ಸಮಿತಿ ಅಧ್ಯಕ್ಷ ರಹೀಂ, ಪಿ.ಎಫ್.ಐ. ವಿಟ್ಲ ಡಿವಿಷನ್ ಅಧ್ಯಕ್ಷ ಶಾಕಿರ್ ಅಳಕೆಮಜಲು, ಪುತ್ತೂರು ನಗರ ಸಮಿತಿ ಅಧ್ಯಕ್ಷ ಬಶೀರ್ ಕೂರ್ನಾಡ್ಕ, ವಲಯ ಸದಸ್ಯ ಹನೀಫ್ ಪೈಸಾರಿ, ಕೇಪು ಗ್ರಾಮ ಸಮಿತಿ ಅಧ್ಯಕ್ಷ ನಝೀರ್ ಅಜ್ಜಿನಡ್ಕ, ಕಾರ್ಯದರ್ಶಿ ತಮ್ಕಿನ್ ಅಲಿ ಸಿಲ್ಮಿ, ಅಳಿಕೆ ಗ್ರಾಮ ಸಮಿತಿ ಕಾರ್ಯದರ್ಶಿ ಸಾಹಿಲ್, ಪೆರುವಾಯಿ ಗ್ರಾಮ ಸಮಿತಿ ಪದಾಧಿಕಾರಿಗಳಾದ ಅನ್ವರ್ ಪೆರುವಾಯಿ, ರಿಯಾಝ್ , ಪುಣಚ ವಲಯ ಕಾರ್ಯದರ್ಶಿ ಎಂಕೆ ಮುನೀರ್ , ಹಿರಿಯ ಕಾರ್ಯಕರ್ತರಾದ ಕಮರುದ್ದೀನ್ ಪರಿಯಾಲ್, ನಿಜಾಮ್ ಪಾಲಸ್ತಡ್ಕ, ಲತೀಫ್ ಕುಟ್ಟಿತಡ್ಕ, ಸಿರಾಜ್, ಯಾಕೂಬ್, ಅಝೀಝ್ ಕೆ. ಪಿ, ಝಿಯಾದ್, ಹನೀಫ್ ಕಲ್ಲಾಜೆ ಉಪಸ್ಥಿತರಿದ್ದರು.ಎಂಕೆ ಮುನೀರ್ ಕಾರ್ಯಕ್ರಮ ನಿರೂಪಿಸಿದರು.