Monday, April 29, 2024
spot_imgspot_img
spot_imgspot_img

ವಿಟ್ಲ : ಸೆರ್ಕಳ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ – ಅಸ್ಮ ಹಸೈನಾರ್ ಮಾಧ್ಯಮದಲ್ಲಿ ಕೊಟ್ಟ ಹೇಳಿಕೆಗೆ ಸ್ಪಸ್ಟೀಕರಣ

- Advertisement -G L Acharya panikkar
- Advertisement -

ವಿಟ್ಲ : ಅಸ್ಮ ಹಸೈನಾರ್ ಅವರು ಕೊಲ್ನಾಡು ಸೆರ್ಕಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಬಗ್ಗೆ ರಕ್ತದಾನ ಹೆಸರಲ್ಲಿ ಸಂಘ ಸಂಸ್ಥೆಗಳ ವ್ಯಾಪರೀಕರಣ ಸಲ್ಲದು ಎಂಬ ಮಾಧ್ಯಮದಲ್ಲಿ ಕೊಟ್ಟ ಹೇಳಿಕೆಗೆ ಸ್ಪಸ್ಟೀಕರಣ

ಕೊಲ್ನಾಡು ಸೆರ್ಕಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಇದರ ವತಿಯಿಂದ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಅಕ್ಷಯ ಬ್ಲಡ್ ಡೋನರ್ಸ್ ಇದರ 27 ನೇ ರಕ್ತದಾನ ಶಿಬಿರವು ದಿನಾಂಕ 10-12-2023 ರಂದು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಸೆರ್ಕಳದಲ್ಲಿ ನಡೆಸಲಾಯಿತು.
ಈ ರಕ್ತದಾನ ಶಿಬಿರದಲ್ಲಿ 57 ಶಿಬಿರಾರ್ಥಿಗಳು ರಕ್ತದಾನ ಮಾಡಿ ಜೀವದಾನಿಯಾಗಿರುತ್ತಾರೆ.

ಕಾರ್ಯಕ್ರಮವನ್ನು ಕೊಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು ಅವರ ಅಧ್ಯಕ್ಷತೆಯಲ್ಲಿ, ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ರಾಜಕೀಯ ನೇತಾರರು, ಗ್ರಾಮ ಪಂಚಾಯತ್ ಸದಸ್ಯರು ಭಾಗವಹಿಸಿದರಲ್ಲದೇ ಕೆಲ ಗಣ್ಯರಿಗೆ ಮಾತನಾಡಲು ಅವಕಾಶವನ್ನು ನೀಡಿರುತ್ತೇವೆ. ಆದರೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇದ್ದ ಅಸ್ಮ ಹಸೈನಾರ್ ಅವರು ಸ್ಟೇಜ್ ಗೆ ಬಂದು ಕುಳಿತು ವೇದಿಕೆಯಲ್ಲಿರುವ ಗಣ್ಯರು ಮಾತನಾಡುತ್ತಿರುವಾಗ ಅವರೇ ಮೈಕದ ಬಳಿ ಹೋಗಿ ಮಾತನಾಡಿ ಈ ಕಾರ್ಯಕ್ರಮಕ್ಕೆ ನಿಷ್ಕಳಂಕ ತರುವ ನಿಟ್ಟಿನಲ್ಲಿ ಕೊಲ್ನಾಡು ಸೆರ್ಕಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಬಗ್ಗೆ ಇಲ್ಲ ಸಲ್ಲದ ಬಗ್ಗೆ ಪತ್ರಿಕಾ ಮಾಧ್ಯಮದಲ್ಲಿ ಸುಳ್ಳು ಹೇಳಿಕೆಯನ್ನು ನೀಡಿರುವುದು ನಮ್ಮೆಲ್ಲರ ಗಮನಕ್ಕೆ ಬಂದ ವಿಚಾರವಾಗಿರುತ್ತದೆ.

ತನ್ನ ರಾಜಕೀಯ ಲಾಭಕ್ಕೊಸ್ಕರ ಶಾಲೆಯ ಹೆಸರನ್ನು ಹಾಳು ಮಾಡುವ ದುರುದ್ದೇಶವನ್ನು ಇಟ್ಟುಕೊಂಡೆ ಕೊಲ್ನಾಡು ಸೆರ್ಕಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ರಕ್ತದಾನ ಹೆಸರಿನಲ್ಲಿ ಸಂಘ ಸಂಸ್ಥೆಗಳ ವ್ಯಾಪರೀಕರಣ ಸಲ್ಲದು ಎಂಬ ಸುಳ್ಳು ಹೇಳಿಕೆಯನ್ನು ನೀಡಿರುತ್ತಾರೆ. ಇಂತಹ ಘಟನೆಗಳನ್ನು ಮಾಡಿಕೊಂಡೇ ಇರುವ ಅಸ್ಮ ಹಸೈನಾರ್ ಮಾಧ್ಯಮದವರಿಗೂ ಸುಳ್ಳು ಮಾಹಿತಿ ನೀಡುವುದು ಅಲ್ಲದೇ ಬೇರೆ ಯಾರಾದರೂ ಏನೇ ಕಾರ್ಯಕ್ರಮ ಮಾಡಿದರು ಅವರ ಜೊತೆ ನಿಂತು ಫೊಟೋ ತೆಗೆದು ನಾವೇ ಮಾಡಿರುತ್ತಾರೆ ಎಂದು ಸಾಮಾಜಿಕ ಜಾಲತಾಣ ಹಾಗೂ ವಾಟ್ಸಫ್ ಗ್ರೂಪ್ ನಲ್ಲಿ ಶೇರ್ ಮಾಡುವುದು ಇದು ಅವರ ಕಸುಬು ಆಗಿರುತ್ತದೆ. ಇದನ್ನೇ ರೂಢಿಯಾಗಿ ಬಳಸಿಕೊಂಡಿರುವ ಅಸ್ಮ ಹಸೈನಾರ್ ಇವರ ರಾಜಕೀಯ ನೀಚ ಬುದ್ದಿ ಇಲ್ಲಿಗೆ ನಿಲ್ಲುವಂತಾಗಬೇಕು.
ಈ ಕಾರ್ಯಕ್ರಮವನ್ನು ಮಾಡಿರುವ ಪ್ರತಿಯೊಂದು ಕಾರ್ಯವು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಮಾಡಿರುತ್ತೇವೆ ವಿನಃ ಯಾವುದೇ ಕೃತ್ಯವನ್ನು ಎಸಗುವಂತೆ ಅಥವಾ ಇನ್ನೊಂದು ಸಂಘಟನೆಗೆ ನೋವಾಗುವಂತಹ ರೀತಿಯಲ್ಲಿ ಯಾವುದೇ ಕಾರಣಕ್ಕೂ ವ್ಯವಹರಿಸುವಂತಹ ರೀತಿಯಲ್ಲಿ ಮಾಡಿರುವುದಿಲ್ಲ.ಅಶ್ರಫ್ ಎಸ್.ಕೆ ಅಧ್ಯಕ್ಷರು ಕೊಲ್ನಾಡು ಸೆರ್ಕಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವರು ಸ್ಪಸ್ಟೀಕರಣ ನೀಡಿದ್ದಾರೆ.

- Advertisement -

Related news

error: Content is protected !!