- Advertisement -
- Advertisement -
ಮಂಗಳೂರು :-ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲುವಿನಲ್ಲಿ ಮೀನುಗಾರರ ದೋಣಿಯೊಂದು ಸಮುದ್ರದ ಮಧ್ಯದಲ್ಲಿ ಮಗುಚಿಬಿದ್ದು ಅದರಲ್ಲಿದ್ದ ಆರು ಮಂದಿ ಮೀನುಗಾರರು ಯಾವುದೇ ಪ್ರಾಣಾಯಪಾಯ ಇಲ್ಲದೇ ಪಾರಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.ಮೀನುಗಾರಿಕೆಗೆ ತೆರಳಿದ್ದ ದೋಣಿಯಲ್ಲಿ ಸುಧಾಕರ್, ತಾರನಾಥ್, ಹೇಮನಾಥ್ ಸೇರಿದಂತೆ ಆರು ಮಂದಿ ಮೀನುಗಾರರು ಇದ್ದರು.
ಪ್ರತಿನಿತ್ಯದಂತೆ ಇಂದು ಕೂಡ ಮೀನುಗಾರಿಕೆ ಮಾಡಲು ತೆರಳಿದ್ದು, ಈ ವೇಳೆ ಏಕಾಏಕಿ ಸಮುದ್ರದ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿಬಿದ್ದಿದೆ. ಈ ವೇಳೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಲ್ಲಾ ಮೀನುಗಾರರು ಸಮುದ್ರದಲ್ಲಿ ಈಜಿದ್ದು, ಮೂವರು ಮೀನುಗಾರರು ಈಜಾಡಿಕೊಂಡೇ ದಡ ಸೇರಿದರೆ, ಇನ್ನಿಬ್ಬರನ್ನು ಮತ್ತೊಂದು ದೋಣಿಯ ಮೂಲಕ ರಕ್ಷಿಸಲಾಗಿದೆ. ಉಳಿದ ಒರ್ವ ಮೀನುಗಾರ ಉತ್ತರ ದಿಕ್ಕಿನಲ್ಲಿ ಸಾಗುತ್ತಿದ್ದ ದೋಣಿಯವರೆಗೆ ಈಜಿಕೊಂಡು ಸಾಗಿ ಸ್ವಯಂ ರಕ್ಷಣೆಗೊಳಗಾಗಿದ್ದಾರೆ. ಅವರು ಆ ದೋಣಿಯ ಮೂಲಕ ಸುರಕ್ಷಿತವಾಗಿ ದಡಕ್ಕೆ ಸೇರಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
- Advertisement -