Saturday, August 1, 2026
spot_imgspot_img
spot_imgspot_img

ಡೆತ್ ನೋಟ್ ಬರೆದಿಟ್ಟು ಬಾಲಿವುಡ್ ನಟ ಆತ್ಮಹತ್ಯೆ!

- Advertisement -
- Advertisement -

ಮುಂಬೈ: ಬಾಲಿವುಡ್ ನಟ ಸಂದೀಪ್ ನಹಾರ್ ಡೆತ್ ನೋಟ್ ಬರೆದಿಟ್ಟು ಮುಂಬೈನ ಗೊರೆಗಾವ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಮುಂಬೈ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಫೇಸ್ ಬುಕ್‌ನಲ್ಲಿ ಸಾವಿಗೂ ಮೊದಲು ನೋವು ತೋಡಿಕೊಂಡ ನಟ ಸಂದೀಪ್ ನಹಾರ್ ತಮ್ಮ ವೈಯಕ್ತಿಕ ಸಮಸ್ಯೆಗಳು ಹಾಗೂ ಅವುಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬುದರ ಬಗ್ಗೆ ತೋಚದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

‘ಎಂ.ಎಸ್. ಧೋನಿ ದಿ ಅನ್ ಟೋಲ್ಡ್ ಸ್ಟೋರಿ’ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೊತೆಗೆ ಇದೇ ಸಂದೀಪ್ ನಹಾರ್ ಕೂಡಾ ನಟನೆ ಮಾಡಿದ್ದರು. ಅಲ್ಲದೆ ಅಕ್ಷಯ್ ಕುಮಾರ್ ನಟನೆಯ ‘ಕೇಸರಿ’ ಚಿತ್ರದ ಪ್ರಮುಖ ಪಾತ್ರದಲ್ಲಿ ಸಂದೀಪ್ ನಹಾರ್ ಅಭಿನಯಿಸಿದ್ದರು.

- Advertisement -

Related news

error: Content is protected !!