






ನೇರಳೆಕಟ್ಟೆ: ಅಮೆರೀಕಾದಲ್ಲಿ ವಾಸವಾಗಿದ್ದು ಊರಿನ ಶಾಲೆಯ ಮೇಲೆ ಅಪಾರ ಗೌರವ ಹೊಂದಿರುವ ಉರ್ದಿಲಗುತ್ತು ರಾಮಪ್ರಸಾದ್ ರೈ ಅವರ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನೇರಳೆಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.

ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಕೆ ಹೆಗಡೆ ಉರ್ದಿಲಗುತ್ತುರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ರಶೀದ್ ಪಿಕೆ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಶತಮಾನೋತ್ಸವ ಸಮಿತಿಯ ಕಾರ್ಯಧ್ಯಕ್ಷ ನಿರಂಜನ್ ರೈ ಕುರ್ಲೆತ್ತಿಮಾರು ಮಕ್ಕಳಿಗೆ ಶುಭ ಹಾರೈಸುತ್ತಾ ಪ್ರತಿ ವರ್ಷ ಸುಮಾರು 40,000 ಸಾವಿರ ರೂಪಾಯಿ ವೆಚ್ಚದಲ್ಲಿ ಎಲ್ಲಾ ಮಕ್ಕಳಿಗೂ ಉಚಿತ ನೋಟ್ ಪುಸ್ತಕ ನೀಡುತ್ತಿರುವ ಮಹಾದಾನಿಗಳಿಗೆ ಮಕ್ಕಳು ತಾವು ಉತ್ತಮ ವಿದ್ಯಾರ್ಜನೆಯನ್ನು ಮಾಡಿ ನಾಡಿಗೆ ಅತ್ಯುತ್ತಮ ಪ್ರಜೆಗಳಾಗಿ ಈ ಸಮಾಜಕ್ಕೆ ನಿಮ್ಮಿಂದಾದ ಇದೆ ರೀತಿಯ ಕೊಡುಗೆಗಳನ್ನು ನೀಡುವಂತಾಗಬೇಕು ಆಗಲೇ ಆ ಮಹಾದಾನಿಗಳಿಗೆ ನೀವು ಪ್ರತಿ ಗೌರವ ಸಲ್ಲಿಸಿದ ಹಾಗೆ ಆಗುತ್ತದೆ ಎಂದರು .


ಕಾರ್ಯಕ್ರಮದಲ್ಲಿ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಶಶಿಕಲಾ ಹಾಗೂ ಯಸ್ ಡಿಎಂಸಿ ಯ ಸರ್ವ ಸದಸ್ಯರು ಭಾಗವಹಿಸಿದ್ದರು. ಶಾಲಾ ಸಹ ಶಿಕ್ಷಕಿ ಶ್ರೀಮತಿ ಯಶೋಧ ಸ್ವಾಗತಿಸಿದರು, ಶಿಕ್ಷಕಿ ಶ್ರೀಮತಿ ಆಯೀಷಾ ಧನ್ಯವಾದಗೈದರು. ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.