- Advertisement -
- Advertisement -




ಜೈಪುರ: ರಾಜಸ್ಥಾನದ ಕಾಲಿಖಾಡ್ ಗ್ರಾಮದಲ್ಲಿ ಸೋಮವಾರ ಸಂಜೆ 3 ಗಂಟೆ ಸುಮಾರಿಗೆ ಆಟವಾಡುವಾಗ ಕೊಳವೆಬಾವಿಗೆ ಮಗು ಬಿದ್ದ ಘಟನೆ ನಡೆದಿದೆ.
ಘಟನೆ ನಡೆದ ತಾಸುಗಳ ಒಳಗಾಗಿ ಕಾರ್ಯಾಚರಣೆ ಶುರುವಾಗಿದೆ. 5 ವರ್ಷದ ಮಗು ಆರ್ಯನ್ ನನ್ನು ರಕ್ಷಿಸುವ ಕಾರ್ಯಾಚರಣೆಯನ್ನು NDRF ಪಡೆ ಸತತ 48 ಗಂಟೆಗಳಿಂದ ಮಾಡುತ್ತಿದೆ.150 ಅಡಿಗಳಷ್ಟು ಆಳವಿರುವ ಕೊಳವೆಬಾವಿಗೆ ಮಗು ಬಿದ್ದಿದ್ದು, ಈಗಾಗಲೇ 110 ಅಡಿಗಳಷ್ಟು ಆಳವನ್ನು ಕೊರೆದಾಗಿದ್ದು, ಇನ್ನು 40 ಅಡಿಗಳಷ್ಟು ಬಾಕಿ ಇದೆ. ಡ್ರಿಲ್ಲಿಂಗ್ ಮೂಲಕ ಮುಂದಿನ ಹಂತವನ್ನು ಕೂಡ ಕೊರೆಯಲಾಗುವುದು. ಆಳದಲ್ಲಿ ಮಣ್ಣು ತೇವಯುತವಾಗಿರುವುದರಿಂದ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಸಾಧ್ಯವಾಗುತ್ತಿಲ್ಲ. ಕೊಳವೆ ಬಾವಿಯ ಸಮಾಂತರವಾಗಿ ಅಗೆಯಲಾಗುತ್ತಿದ್ದು, ಒಂದು ವೇಳೆ ಮಗು 150 ಅಡಿಗಿಂತಆಳದಲ್ಲಿದ್ದರೆ ಮಗುವಿನ ರಕ್ಷಣೆ ಕಷ್ಟಸಾಧ್ಯ ಎಂದು NDRF ಮಾಹಿತಿ ನೀಡಿದೆ.
- Advertisement -