Tuesday, September 1, 2026
spot_imgspot_img
spot_imgspot_img

ಗೆಳೆಯರೊಂದಿಗೆ ಸ್ನಾನಕ್ಕೆಂದು ನದಿಗೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಕೊಡಗು: ಯುವಕ ಕೇರಳದ ಇರಿಟ್ಟಿಯ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಚೇರಳ ಶ್ರೀಮಂಗಲ ಚೆಟ್ಟಳ್ಳಿಯ ಪ್ರದೀಶ್ (22) ಎಂಬಾತ ಮೃತ ಯುವಕ.

ಕೇರಳದ ಇರಿಟ್ಟಿಯ ಕುಟುಪುಯ ಎಂಬಲ್ಲಿ ಕೇಬಲ್ ಕೆಲಸದಲ್ಲಿದ್ದ ಪ್ರದೀಶ್ ಹಾಗೂ ಮತ್ತಿಬ್ಬರು ಗುರುವಾರ ವಳವುಪಾರ ಬಳಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದಾರೆ. ಈ ಸಂದರ್ಭ ಪ್ರದೀಶ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇರಿಟ್ಟಿ ಅಗ್ನಿಶಾಮಕ ದಳದವರು ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಇರಿಟ್ಟಿ ಸಬ್ ಇನ್‍ಸ್ಪೆಕ್ಟರ್ ಪುಷ್ಕರನ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಿಯಾರಮ್ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತ ದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ.

- Advertisement -

Related news

error: Content is protected !!