Monday, July 27, 2026
spot_imgspot_img
spot_imgspot_img

ಕರೆಂಟ್ ಶಾಕ್‌ ತಗುಲಿ ಬಾಲಕ ಸಾವು; ಮೃತದೇಹವನ್ನು ಕೆರೆಗೆಸೆದ ಸ್ನೇಹಿತರು!

- Advertisement -
- Advertisement -

ರಾಯಚೂರು: ಹೊಸ ಬಟ್ಟೆ ಖರೀದಿಗೆ ಸ್ನೇಹಿತರೊಂದಿಗೆ ಹೋದ 9 ನೇ ತರಗತಿ ಬಾಲಕನೊಬ್ಬ ಕರೆಂಟ್ ಶಾಕ್ ತಗುಲಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ನಡೆದಿದೆ. ಗುಂಡಸಾಗರ ಗ್ರಾಮದ ಕಾರ್ತಿಕ್(15) ಮೃತಪಟ್ಟ ಬಾಲಕ.

ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ ಹಿನ್ನೆಲೆ ಹೊಸ ಬಟ್ಟೆ ಖರೀದಿಗೆ ತನ್ನ ಇಬ್ಬರು 10ನೇ ತರಗತಿಯ ಸ್ನೇಹಿತರ ಜತೆ ಕಾರ್ತಿಕ್ ಕೂಡ ಹೋಗಿದ್ದ ಎನ್ನಲಾಗಿದೆ.

ದಾರಿ ಮಧ್ಯೆ ಬಾಯಾರಿಕೆಯಾಗಿದ್ದು, ಬಾವಿಯಲ್ಲಿ ನೀರು ಕುಡಿಯಲು ಹೋದಾಗ ಕಾರ್ತಿಕ್‌ಗೆ ಕರೆಂಟ್ ಶಾಕ್ ತಗುಲಿ, ಕಾರ್ತಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮೃತಪಟ್ಟ ಬಳಿಕ ಗಾಬರಿಗೊಂಡ ಆತನ ಸ್ನೇಹಿತರು, ವಿಷಯ ಯಾರಿಗೂ ತಿಳಿಯದಂತೆ ಮಾಡಲು ಶವಕ್ಕೆ ಕಲ್ಲುಗಳನ್ನು ಕಟ್ಟಿ, ಗೋಣಿ ಚೀಲದಲ್ಲಿ ಹಾಕಿ ಕೆರೆಗೆ ಎಸೆದಿದ್ದಾರೆ.

ಬಾಲಕ ನಾಪತ್ತೆಯಾದ ಬಗ್ಗೆ ಕಾರ್ತಿಕ್ ಪೋಷಕರು ನೀಡಿದ ದೂರಿನ ಅನ್ವಯ, ಅನುಮಾನಗೊಂಡು ವಿಚಾರಣೆ ನಡೆಸಿದಾಗ, ಅವನ ಜತೆಗಿದ್ದ ಅಪ್ರಾಪ್ತ ಸ್ನೇಹಿತರು ಈ ಭಯಾನಕ ಸತ್ಯವನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಂಗಸುಗೂರು ಪೊಲೀಸರು ಪ್ರಕರಣ ದಾಖಲಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!