- Advertisement -




- Advertisement -
10 ವರ್ಷದ ಬಾಲಕ ಜೋಕಾಲಿ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಸಾವನ್ನಪ್ಪಿರುವ ದಾರುಣ ಘಟನೆ ರಾಜಸ್ಥಾನದ ಬರನ್ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಚಬ್ರಾ ನಿವಾಸಿ ಅದಿಲ್ ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಮನೆಯಲ್ಲಿ ಆತನಿಗೆ ಆಟವಾಡಲು ಉಯ್ಯಾಲೆ ಕಟ್ಟಿಕೊಡಲಾಗಿತ್ತು. ಅದಿಲ್ ಮಂಗಳವಾರ ಮತ್ತೊಂದು ಮಗು ಜೊತೆ ಉಯ್ಯಾಲೆ ಆಡುತ್ತಿದ್ದ. ಈ ವೇಳೆ ಆತನ ಕುತ್ತಿಗೆಗೆ ಹಗ್ಗ ಸುತ್ತಿಕೊಂಡಿದೆ. ನಂತರ ಬಾಲಕ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿಬಿದ್ದಿದ್ದಾನೆ ಎಂದು ಚಬ್ರಾ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೂಡಲೇ ಬಾಲಕನ್ನು ಆಸ್ಪತ್ರೆಗೆ ಆತನನ್ನು ಕರೆದುಕೊಂಡು ಹೋಗಿದ್ದು, ಆದರೆ ವೈದ್ಯರು ಮೃತಪಟ್ಟಿದ್ದಾನೆ ಎಂದು ತಿಳಿಸಿದರು. ಅದಿಲ್ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.
- Advertisement -