Tuesday, May 7, 2024
spot_imgspot_img
spot_imgspot_img

ಹಸೆಮಣೆ ಏರಿದ ಸಲಿಂಗಿ ಜೋಡಿ; ಬೆಂಗಾಲಿ ಸಂಪ್ರದಾಯದಂತೆ ಅದ್ದೂರಿ ವಿವಾಹ..!!

- Advertisement -G L Acharya panikkar
- Advertisement -

ಕೋಲ್ಕತ್ತಾದಲ್ಲಿ ಸಲಿಂಗಿ ಜೋಡಿಯೊಂದು ಕಾನೂನು ಮಾನ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ಹಸೆಮಣೆ ಏರಿದ್ದಾರೆ. ಸಾಂಪ್ರದಾಯಿಕ ಬೆಂಗಾಲಿ ವಿವಾಹದಂತೆ ಈ ಸಮಾರಂಭ ನಡೆದಿದೆ. ಅರಿಶಿಣಶಾಸ್ತ್ರ, ಸಂಗೀತ, ಮೆಹಂದಿ ಸಪ್ತಪದಿ ಸೇರಿದಂತೆ ಎಲ್ಲಾ ಆಚರಣೆಗಳನ್ನು ನಡೆಸಿದ ಈ ಜೋಡಿ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ.

ಮೌಸುಮಿ ದತ್ತ ಹಾಗೂ ಮೌನಿತಾ ಮಜಮ್ದಾರ್ ಎಂಬುವವರೇ ಸಲಿಂಗ ವಿವಾಹವಾದ ಜೋಡಿಗಳು. ಇದು ಕೋಲ್ಕತ್ತಾದಲ್ಲಿ ನಡೆದ ಮೂರನೇ ಸಲಿಂಗ ವಿವಾಹವಾಗಿದೆ.

ಸಲಿಂಗ ವಿವಾಹವೂ ಭಾರತದಲ್ಲಿ ಕಾನೂನುಬದ್ಧವಾಗಿಲ್ಲ, ಹೀಗಾಗಿ ಇಂತಹ ಸಂಬಂಧ ಅನೈತಿಕವಾಗಿದೆ. ಆದರೆ ಕೋಲ್ಕತ್ತಾ ನಗರವೂ ಇಂತಹ ಸಲಿಂಗ ವಿವಾಹಕ್ಕೆ ಮೇಲ್ಪಂಕ್ತಿ ಹಾಕಿದ್ದು, ಮೌನಿತಾ ಹಾಗೂ ಮೌಸಮಿ ಅವರ ವಿವಾಹವೂ ಇಲ್ಲಿ ನಡೆಯುತ್ತಿರುವ ಮೂರನೇ ಸಲಿಂಗ ವಿವಾಹವಾಗಿದೆ. ಮೌಮಿತಾ ಹಾಗೂ ಮೌಸಮಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಮೊದಲಿಗೆ ಭೇಟಿಯಾಗಿದ್ದು, ನಂತರ ಚಾಟಿಂಗ್ ಮಾಡುತ್ತಾ ಸ್ನೇಹ ಶುರುವಾಗಿದ್ದು, ಜೊತೆಯಾಗಿ ಸುತ್ತಾಡಲು ಆರಂಭಿಸಿದ ನಂತರ ಪ್ರೀತಿ ಹುಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

ಮೌನಿತಾ ಹಾಗೂ ಮೌಸಮಿ ಮೊದಲಿಗೆ ಸದ್ದಿಲ್ಲದೇ ವಿವಾಹವಾಗುವ ಮೂಲಕ ಈ ವಿವಾಹವನ್ನು ಖಾಸಗಿಯಾಗಿ ಇಡಬೇಕೆಂದೇ ಭಾವಿಸಿದ್ದರು. ಆದರೆ ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ತಮ್ಮ ಈ ಮದುವೆ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಜೋಡಿ ಕೋಲ್ಕತ್ತಾದ ಶೋವ ಬಜಾರ್‌ನಲ್ಲಿರುವ ಅರಿಟೋಲಾ ಪ್ರದೇಶದ ಭೂತನಾಥ್ ದೇಗುಲದಲ್ಲಿ ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ. ಮೌನಿತಾ ಮೌಸಮಿ ಹಣೆಗೆ ತಿಲಕ ಇರಿಸಿ ಈ ವಿವಾಹ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ಪ್ರಸ್ತುತ ಈ ನವದಂಪತಿ ಉತ್ತರ ಕೋಲ್ಕತ್ತಾದ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಆದರೆ ತಾವು ವಾಸಿಸುವ ಪ್ರದೇಶವನ್ನು ಗೌಪ್ಯವಾಗಿಡಲು ಈ ಜೋಡಿ ಬಯಸಿದ್ದಾರೆ. ಕೇಂದ್ರ ಸರ್ಕಾರವೂ ಸಲಿಂಗ ವಿವಾಹಕ್ಕೆ ಅನುಮತಿ ನಿರಾಕರಿಸಿದೆ. ಈ ಮಧ್ಯೆ ಭಾರತದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಪ್ರಸ್ತುತ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ವಿಚಾರಣೆ ನಡೆಸುತ್ತಿದ್ದು, ಸುಪ್ರೀಂಕೋರ್ಟ್‌ನಿಂದ ಅನುಕೂಲಕರವಾದ ತೀರ್ಪಿನ ನಿರೀಕ್ಷೆಯಲ್ಲಿ ಸಲಿಂಗಿಗಳಿದ್ದಾರೆ.

- Advertisement -

Related news

error: Content is protected !!