Friday, May 17, 2024
spot_imgspot_img
spot_imgspot_img

ಕೋತಿಗಳ ದಾಳಿಗೆ ಬಾಲಕ ಬಲಿ

- Advertisement -G L Acharya panikkar
- Advertisement -

ಹತ್ತು ವರ್ಷದ ಬಾಲಕನನ್ನು ಕೋತಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.

ಕೋತಿಯೊಂದು ಬಾಲಕನನ್ನು ಹತ್ಯೆ ಮಾಡಿ ಕರುಳನ್ನು ಬಗೆದು ಹೊರ ತೆಗೆದಿದೆ. ಗುಜರಾತ್‌ನ ಗಾಂಧಿನಗರದ ಸಾಲ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೆಹಗಾಂ ತಾಲೂಕಿನ ದೇವಸ್ಥಾನದ ಬಳಿ ಕೋತಿಗಳು ದಾಳಿ ನಡೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದ ಬಾಲಕನನ್ನು ದೀಪಕ್ ಠಾಕೂರ್ ಎಂದು ಗುರುತಿಸಿದ್ದಾರೆ.

ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಆರಂಭಿಸುವ ಮುನ್ನವೇ ಬಾಲಕ ಕೊನೆಯುಸಿರೆಳೆದಿದ್ದಾನೆ. ದೀಪಕ್, ಹಳ್ಳಿಯಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಕೋತಿಗಳ ಗುಂಪನ್ನು ಕಂಡು ಹೆದರಿದ್ದ ಎಂದು ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಮಂಗಗಳು ಬಾಲಕನ ಮೇಲೆ ಹಾರಿದ್ದವು, ಬಳಿಕ ಉಗುರಿನಿಂದ ಪರಚಿವೆ, ಬಳಿಕ ಹೊಟ್ಟೆಯನ್ನು ಬಗೆದು ಕರುಳನ್ನು ಹೊರತೆಗೆದಿದ್ದವು ಎನ್ನಲಾಗಿದೆ. ಒಂದು ವಾರದಲ್ಲಿ ಗ್ರಾಮದಲ್ಲಿ ಕೋತಿಗಳು ನಡೆಸಿದ ಮೂರನೇ ದಾಳಿ ಇದಾಗಿದೆ ಎಂದು ಹೇಳಲಾಗಿದೆ. ಮಂಗಗಳನ್ನು ಹಿಡಿಯಲು ಇಲಾಖೆ ಪ್ರಯತ್ನಿಸುತ್ತಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

- Advertisement -

Related news

error: Content is protected !!