Friday, May 3, 2024
spot_imgspot_img
spot_imgspot_img

(12-14) ಹಿರಣ್ಯ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಹಾಗೂ 5ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ

- Advertisement -G L Acharya panikkar
- Advertisement -

ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಶ್ರೀ ದುರ್ಗಾವನ, ಹಿರಣ್ಯ – ಬಾಯಾರು ದೇವಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಹಾಗೂ 5ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಚಂಡಿಕಾ ಹವನ ತರವಾಡಿನ ಭಂಡಾರದ ಮನೆಯಲ್ಲಿ ನೂತನ ಪೀಠಗಳ ಪ್ರತಿಷ್ಠೆ ಮತ್ತು ಮನೆಯ ಚಾವಡಿಯಲ್ಲಿ ಮಲರಾಯಿ ದೈವದ ಉಯ್ಯಾಲೆ ಪ್ರತಿಷ್ಠೆ ಹಾಗೂ ಬಾಯಾರು ಹಿರಣ್ಯ ಕಂಬಳಗದ್ದೆ ಗುತ್ತು ತರವಾಡು ಮನೆಯಲ್ಲಿ ಶ್ರೀ ಮೈಸಂದಾಯಾದಿ ಪರಿವಾರದೈವಗಳಿಗೆ ಮತ್ತು ಧರ್ಮದೈವಗಳೀಗೆ ನೇಮೋತ್ಸವವು ಏ. 12ನೇ ಶುಕ್ರವಾರದಿಂದ 14ನೇ ಆದಿತ್ಯವಾರದ ವರೆಗೆ ನಡೆಯಲಿದೆ.

ದಿನಾಂಕ: 10-04-2024ನೇ ಬುಧವಾರ ಬೆಳಿಗ್ಗೆ ದೇವಿ ಸನ್ನಿಧಿಯಲ್ಲಿ8:00 ರಿಂದ ಪ್ರಾರ್ಥನೆ , ಸ್ವಸ್ತಿ| ಪುಣ್ಯಾಹವಾಚನ, ಮಹಾಗಣಪತಿ ಹೋಮ, ಚಂಡಿಕಾಹವನ, ದ್ವಾದಶಾಕ್ಷರೀ ಹೋಮ ಪ್ರಾರಂಭ ಮತ್ತು ನಾಗಬನದಲ್ಲಿ ನಾಗತಂಬಿಲ ತರವಾಡು ಮನೆಯಲ್ಲಿ ಗಣಪತಿ ಹೋಮ, ರ್ಶಾರೀ ಸತ್ಯನಾರಾಯಣ ಪೂಜೆ ದೈವಗಳಿಗೆ ಕಲಶಾಭಿಷೇಕ ತಂಬಿಲ ಮತ್ತು ವೆಂಕಟರಮಣ ದೇವರ ಮುಡಿಪು ಕಟ್ಟುವ ಕಾರ್ಯಕ್ರಮ ಮತ್ತು ದೇವಸ್ಥಾನದಲ್ಲಿ ಚಂಡಿಕಾ ಹವನದ ಪೂರ್ಣಾಹುತಿ ಮದ್ಯಾಹ್ನ ಪೂಜೆ ಅನ್ನಸಂತರ್ಪಣೆ ನಡೆದು ಸಂಜೆ 3:00 ರಿಂದ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ ಪೆರೋಡಿ ತಂಡದಿಂದ ಭಜನೆ ನಂತರ ಸಂಜೆ ದೇವಿ ಸನ್ನಿಧಿಯಲ್ಲಿ 5:30 ರಿಂದ ಸ್ವಸ್ತಿ ಪುಣ್ಯಾಹವಾಚನ ಖನನಾದಿ ಸಪ್ತ ಶುದ್ಧಿ, ಪ್ರಸಾದ ಶುದ್ಧಿ, ಅಸ್ತ್ರಕಲಶ ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತುಬಲಿ, ರಾತ್ರಿ ಪೂಜೆ ಹಾಗೂ 9:00 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ: 11-04-2024ನೇ ಗುರುವಾರ ಬೆಳಿಗ್ಗೆ 7:30 ರಿಂದ ದೇವಿ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ಹೋಮ, ಕ್ಷಾಳನಾದಿ ಸಪ್ತಶುದ್ಧಿ, ದ್ವಾರ ಪ್ರಾಯಶ್ಚಿತ್ತ ಹೋಮಗಳು, ಅದ್ಭುತ ಶಾಂತಿ, ತತ್ವ ಹೋಮ, ತತ್ವ ಕಲಶ, ಹೋಮ ಕಲಶಾಭಿಷೇಕ ಹಾಗೂ ಮಧ್ಯಾಃನ ಪೂಜೆ ನಡೆದು ಬಳಿಕ ಮಧ್ಯಾಹ್ನ 12:30ಕ್ಕೆ ಅನ್ನದಾನ ಸಂತರ್ಪಣೆ ಸಂಜೆ 3:00ರಿಂದ ಮಹಾಮ್ಮಾಯಿ ಬಾಲಗೋಕುಲ ಬಾಐಆರು ತಂಡದದ ಮಕ್ಕಳಿಂದ ಕುಣಿತ ಭಜನೆ ನಡೆದು ನಂಥರ 5:30ರಿಂದ ತರವಾಡು ಮನೆಯಲ್ಲಿ ಮಲರಾಐ ದೈವದ ಅಧಿವಾಸ, ಕಲಶ ಪೂರಣೆ, ಕಲಶಾಧಿವಾಸ ಹೋಮ ಭಂಡಾರದ ಮನೆಯಲ್ಲಿ ನೂತನ ಪೀಠಗಳ ಅಧಿವಾಸ, ಕಲಶ ಪೂರಣೆ, ಕಲಶಾಧಿವಾಸ ಹೋಮ ದೇವಿ ಸನ್ನಿಧಿಯಲ್ಲಿ ದ್ರವ್ಯಕಲಶ ಸಹಿತ ಬ್ರಹ್ಮಕಲಶ ಪೂರಣೆ, ಅಧಿವಾಸ ಹೋಮ, ಅಧಿವಾಸ ಬಲಲಿ ಕಲಶಾಧಿವಾಸ ನಡೆದು ರಾತ್ರಿ 9:00 ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ:12-04-2024ನೇ ಶುಕ್ರವಾರ ಬೆಳಿಗ್ಗೆ 7:30 ರಿಂದ ಮಹಾಗಣಪತಿ ಹೋಮ ಮಹಿಷಂತಾಯಾದಿ ಪರಿವಾರ ದೈವಗಳ ಸನ್ನಿಧಿಯಲ್ಲಿ ದೈವಗಳ ಪೀಠ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಹಾಗೂ ತಂಬಿಲ ತರವಾಡು ಮನೆಯ ಮಲರಾಯಿ ಧರ್ಮಚಾವಡಯಲ್ಲಿ ದೈವದ ಉಯ್ಯಾಲೆ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಹಾಗೂ ತಂಬಿಲ ದೇವಿ ಸನ್ನಿಧಿಯಲ್ಲಿ ಸುರ್ಗಾಪರಮೇಸ್ವರಿ ದೇವಿಗೆ ದ್ರವ್ಯ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ಮಹಾಮಂಗಳಾರತಿ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆದು ಬಳಿಕ ಸಂಜೆ 3:00 ಗಂಟೆಗೆ ಧಾರ್ಮಿಕ ಸಭಾಕಾರ್ಯಕ್ರಮ ನಡೆದು ಸಂಜೆ 5:30 ರಿಂದ ಶ್ರೀ ದೇವಿ ಕ್ಷೇತ್ರದಲ್ಲಿ ದೀಪಾರಾಧನೆ, ಶ್ರೀ ರಂಗಪೂಜೆ ,ದುರ್ಗಾಪೂಜೆ ವೈದಿಕ ಮಂತ್ರಕ್ಷತೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದು ಬಳಿಕ ಸಂಜೆ 6:30 ರಿಂದ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ, ಪಾವಂಜೆ ಇವರಿಂದ ಯಕ್ಷದ್ರುವ ಸತೀಶ್ ಶೆಟ್ಟಿ ಪಟ್ಲ ಸಾರಥ್ಯದಲ್ಲಿ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ ಎಂಬ ಪೌರಾಣಿಕ ಕಥಾಭಾಗವನ್ನು ಜಮನಗೆಲ್ಲಿವಂತೆ ಸುಂದರವಾಗಿ ಆಡಿತೋರಿಸಲಿದ್ದಾರೆ.

ದಿನಾಂಕ: 13-04-2024 ನೇ ಶನಿವಾರ ತರವಾಡು ಮನೆಯಲ್ಲಿ ದೈವಗಳಿಗೆ ನೇಮೋತ್ಸವ ಬೆಳಿಗ್ಗೆ 9:00 ಗಂಟೆಗೆ ಮಹಿಷಾಂತಾಯಾದಿ ಪರಿವಾರ ದೈವಗಳಿಗೆ ತಂಬಿಲ 9:30ರ ನಂತರ ತರವಾಡು ಮನೆಗೆ ಭಂಡಾರ ಹೊರಟು10:00 ಗಂಟೆಗೆ ಸರಿಯಾಗಿ ತರವಾಡು ಮನೆಯಲ್ಲಿ ಭಂಡಾರ ಏರುವುದು. ಮಧ್ಯಾಹ್ನ 12:30ಕ್ಕೆ ಶ್ರೀ ದೇವಿಗೆ ಸಂಕ್ರಮಣದ ಮಧ್ಯಾಹ್ನ ಪೂಜೆ ತದನಂತರ ಅನ್ನ ಸಂತರ್ಪಣೆ ಬಳಿಕ ಸಂಜೆ 3:00ಕ್ಕೆ ತರವಾಡು ಮನೆಯಲ್ಲಿ ಮಲರಾಯ ದೈವಕ್ಕೆ ನೇಮೋತ್ಸವ ನಡೆದು ಸಂಜೆ 6:30ಕ್ಕೆ ತರವಾಡು ಮನೆಯಲ್ಲಿ ಕುಂಟುಂಬ ದೈವಗಳಿಗೆ ತಂಬಿಲ ಸೇವೆ ಬಳಿಕ 7:30ಕ್ಕೆ ಸಂಕ್ರಮಣದ ಸಲುವಾಗಗಿ ಭಜನೆ ರಾತ್ರಿ 9:00 ಕ್ಕೆ ಶ್ರೀ ದೇವಿಗೆ ದುರ್ಗಾಪೂಜೆ, ಮಹಾಮಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ಬಳಿಕ 9:30 ಮಹಿಷಾಂತಾಯ ದೈವಕ್ಕೆ ನೇಮೋತ್ಸವ ನಡೆದು ರಾತ್ರಿ 11:30ರಿಂದ ಧೂಮಾವತಿ ದೈವಕ್ಕೆ ನೇಮೋತ್ಸವ ಬಳಿಕ 2:00ರಿಂದ ರಕ್ತೇಶ್ವರಿ ದೈವಕ್ಕೆ ನೆಮೋತ್ಸವ ನಡೆದು ಬಳಿಕ 4:00 ರಿಂದ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ ನಡೆಯಲಿದೆ.

14-04-2024 ಆದಿತ್ಯವಾರ ಮಧ್ಯಾಹ್ನ 3:00 ರಿಂದ ವರ್ಣರ ಪಂಜುರ್ಲಿಗೆ ಕೋಲ ನಡೆದು ಸಂಜೆ 6:00 ರಿಂದ ಕೊರತಿ ದೈವಕ್ಕೆ ಕೋಲ ಬಳಿಕ ರಾತ್ರಿ 8:30 ಕ್ಕೆ ಅನ್ನಪ್ರಸಾದ ಸಂತರ್ಪಣೆ ಬಳಿಕ ರಾತ್ರಿ 9:30ರಿಂದ ಧರ್ಮದೈವ ಕುಪ್ಪೆಪಂಜುರ್ಲಿ ಮತ್ತು ಕಲ್ಲುರ್ಟಿ ದೈವಕ್ಕೆ ಕೋಲ ರಾತ್ರಿ 2:00 ರಿಂದ ಗುಳಿ ದೈವಕ್ಕೆ ಕೋಲ ನಡೆಯಲಿದೆ.

ದಿನಾಂಕ: 15-04-2024ನೇ ಸೋಮವಾರ ಮಧ್ಯಾಹ್ನ 2:30ರಿಂದ ತರವಾಡು ಮನೆಯ ದೈವಗಳಿಗೆ ಕುರಿತಂಬಿಲ ( ಅಗೇಲು ಸೇವೆ) ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!