Tuesday, April 30, 2024
spot_imgspot_img
spot_imgspot_img

ದುರ್ಜನರೊಂದಿಗಿನ ಸಂಪರ್ಕವು ಸರ್ವ ಕೆಡುಕಿಗೆ ಕಾರಣವಾಗುತ್ತದೆ; ಉಸ್ತಾದ್ ಅಶ್ರಫ್ ಸಖಾಫಿ ಸೂರಿಕುಮೇರು

- Advertisement -G L Acharya panikkar
- Advertisement -

ಮಾಣಿ: ಸಜ್ಜನರೊಂದಿಗಿನ ಸಂಪರ್ಕವು ಸರಿಯಾದ ದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ ಗೆಳೆತನ ಮಾಡುವಾಗ ಬಹಳ ಎಚ್ಚರಿಕೆಯಿಂದ ಗೆಳೆಯರನ್ನು ಆರಿಸಬೇಕು ದುರ್ಜನರ ಸಂಪರ್ಕವು ಸರ್ವ ಕೆಡುಕಿಗೆ ಕಾರಣವಾಗುತ್ತದೆ, ಅನುಸರಣೆಗೆ ಯೋಗ್ಯರಲ್ಲದವರಿಂದ ಸಾಧ್ಯವಾದಷ್ಟು ದೂರವಿರಿ ಎಂದು ಉಸ್ತಾದ್ ಅಶ್ರಫ್ ಸಖಾಫಿ ಸೂರಿಕುಮೇರು ಹೇಳಿದರು.

ಅವರು ಎಸ್‌ವೈ‌ಎಸ್ ಹಾಗೂ ಎಸ್ಸೆಸ್ಸೆಫ್ ಸೂರಿಕುಮೇರು ಇದರ ವತಿಯಿಂದ ನಡೆದ ಮಹ್‌‌ಳರತುಲ್ ಬದ್ರಿಯಾ ಎಂಬ ಆಧ್ಯಾತ್ಮಿಕ ಮಜ್ಲಿಸ್‌ಗೆ ನೇತೃತ್ವ ನೀಡಿ ದುಆ ನಡೆಸಿ ಪ್ರಾಸ್ತಾವಿಕ ಭಾಷಣ ಮಾಡಿದರು.ಇಸಾಕ್ ಮಾಣಿ ಮತ್ತು ಮುಈನ್ ಮಾಣಿ ಬೈತ್ ಆಲಾಪನೆ ನಡೆಸಿಕೊಟ್ಟರು.

ಇದನ್ನೂ ಓದಿ: ಮಂಗಳೂರು: ತಂಗಿಯ ಆಭರಣಗಳನ್ನು ಕಳವು ಮಾಡಿ ಪ್ರಿಯಕರನೊಂದಿಗೆ ಪರಾರಿಯಾದ ವಿವಾಹಿತೆ ಅಕ್ಕ!

ಕಾರ್ಯಕ್ರಮದಲ್ಲಿ ಎಸ್‌ವೈ‌ಎಸ್ ಮಾಣಿ ಸೆಂಟರ್ ನಾಯಕರಾದ ಎಸ್ ಆರ್ ಸುಲೈಮಾನ್ ಸೂರಿಕುಮೇರು, ಹಾಜಿ ಯೂಸುಫ್ ಸೂರಿಕುಮೇರು, ಅಬ್ದುಲ್ ಕರೀಂ ಸೂರಿಕುಮೇರು, ಅಬ್ದುಲ್ ಫತ್ತಾಹ್ ಮಾಣಿ, ಅಝೀಂ ಸೂರಿಕುಮೇರು, ಇಮ್ರಾನ್ ಸೂರಿಕುಮೇರು, ಜಮಾಲ್ ಮಾಣಿ, ಸಾಬಿತ್ ಮಾಣಿ, ಸವಾದ್ ಮಾಣಿ, ಮುಂತಾದ ಗಣ್ಯರು ಉಪಸ್ಥಿತರಿದ್ದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿ ವಂದಿಸಿದರು.

- Advertisement -

Related news

error: Content is protected !!