Saturday, June 13, 2026
spot_imgspot_img
spot_imgspot_img

ಬ್ರಹ್ಮಾವರ: ಜಗಳ ತಾರಕಕ್ಕೇರಿ ಪತ್ನಿಯ ಕೊಲೆ; ಆರೋಪಿ ಪತಿಯ ಬಂಧನ..!

- Advertisement -
- Advertisement -

ಬ್ರಹ್ಮಾವರ: ಬೆಳ್ಳಂಬೆಳಿಗ್ಗೆ ಗಂಡ ಹೆಂಡತಿ ನಡುವೆ ಜಗಳ ಉಂಟಾಗಿ, ಜಗಳ ತಾರಕಕ್ಕೇರಿ ಪತಿ ಪತ್ನಿಗೆ ಹೊಡೆದ ಪರಿಣಾಮ, ಪತ್ನಿ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಪಡುವಳಿ ಎಂಬಲ್ಲಿ ನಡೆದಿದೆ.

ಕೊಲೆಗೈದ ಆರೋಪಿಯನ್ನು ಸಾಸ್ತಾನ ಗುಂಡ್ಮಿ ನಿವಾಸಿ ಕಿರಣ್ ಉಪಾಧ್ಯಾಯ(30) ಹಾಗೂ ಕೊಲೆಯಾದ ಆತನ ಪತ್ನಿ ಜಯಶ್ರೀ (28) ಎಂದು ಗುರುತಿಸಲಾಗಿದೆ.

ಕೊಲೆ ಮಾಡಿದ ಆರೋಪಿ ಆಕೆಯ ಪತಿ ಕಿರಣ್ ಉಪಾಧ್ಯಾಯ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕೊಲೆ ಕೃತ್ಯ ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ.

ಕಿರಣ್ ಕಳೆದ ಎರಡು ವರ್ಷಗಳಿಂದ ನರಸಿಂಹ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ. ಕೋಟ ಪೊಲೀಸರು ತನಿಖೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಕೊಲೆಯ ಬಗ್ಗೆ ತನಿಖೆಯಿಂದ ಇನ್ನಷ್ಟು ಮಾಹಿತಿ ಬರಬೇಕಾಗಿದೆ.

- Advertisement -

Related news

error: Content is protected !!